×
Ad

ಪಾವೂರು ಉಳಿಯ: ಹಾನಿಗೀಡಾದ ಸೇತುವೆ ದುರಸ್ತಿಗೆ ನೆರವು

Update: 2019-02-07 21:55 IST

ಮಂಗಳೂರು, ಫೆ.7: ದುಷ್ಕರ್ಮಿಗಳಿಂದ ಇತ್ತೀಚೆಗೆ ಹಾನಿಗೀಡಾದ ಪಾವೂರು ಉಳಿಯದ ಸೇತುವೆ ದುರಸ್ತಿಗೆ ಗುರುವಾರ ಪಾವೂರು ಗ್ರಾಮ ಯುವ ಕಾಂಗ್ರೆಸ್ ಸಮಿತಿಯು ನೆರವು ನೀಡಿತು. ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರನ್ನು ಒಳಗೊಂಡ ನಿಯೋಗವು ಘಟನೆ ನಡೆದ ಸ್ಥಳಕ್ಕೆ ಭೇಟಿ ಹಲಗೆಯನ್ನು ದೋಣಿ ಮೂಲಕ ಸಾಗಿಸಿತಲ್ಲದೆ, ದುರಸ್ತಿ ಕಾರ್ಯದಲ್ಲೂ ತೊಡಗಿಸಿಕೊಂಡಿತು.

ಪಾವೂರು ಉಳಿಯದಿಂದ ಅಡ್ಯಾರ್‌ಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಮತ್ತು ಪಾಲನಾ ಸಮಿತಿ ಹಾಗೂ ಸ್ಥಳೀಯರು ಸೇತುವೆಯನ್ನು ಕೆಲವು ದಿನಗಳ ಹಿಂದೆ ನಿರ್ಮಿಸಿ ಸರಕಾರದ ಗಮನ ಸೆಳೆದಿದ್ದರು. ಈ ಮಧ್ಯೆ ಸಮೀಪದಲ್ಲೇ ನಡೆಯುವ ಮರಳುಗಾರಿಕೆ ಅಡ್ಡೆಗೆ ಕಂದಾಯ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಲು ಪಾವೂರು ಉಳಿಯ ನಿವಾಸಿಗಳೇ ಕಾರಣ ಎಂದು ಶಂಕಿಸಿದ್ದ ದುಷ್ಕರ್ಮಿಗಳು ಸೇತುವೆಗೆ ಭಾಗಶಃ ಹಾನಿಗೈಯುವ ಮೂಲಕ ದ್ವೇಷ ಸಾಧಿಸಿದ್ದರು. ಸುದ್ದಿ ತಿಳಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೆ, ದುರಸ್ತಿ ಮಾಡಿಸಿಕೊಡುವ ಆಶ್ವಾಸನೆ ನೀಡಿದ್ದರು.

ಅದರಂತೆ ಪಾವೂರು ಯುವ ಕಾಂಗ್ರೆಸ್ ಸಮಿತಿಯ ಸದಸ್ಯರು ಉಳಿಯ ಪ್ರದೇಶದ ಜನರೊಂದಿಗೆ ಸ್ವತಃ ಕಾಮಗಾರಿಯಲ್ಲಿ ತೊಡಗಿಸಿಕೊಂಡರು. ಈ ಸಂದರ್ಭ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಗ್ರಾಪಂ ಅಧ್ಯಕ್ಷ ಪಿರೋಝ್ ಮಲಾರ್, ಸದಸ್ಯರಾದ ವಿವೇಕ್ ರೈ, ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬುಸಾಲಿ ಗಾಡಿಗದ್ದೆ, ಯುವ ಕಾಂಗ್ರೆಸ್‌ನ ರಿಯಾಝ್ ಗಾಡಿಗದ್ದೆ, ದಾವೂದ್ ಬಾಷಾ, ಪ್ರದೀಪ್ ಡಿಸೋಜ, ಇರ್ಫಾನ್ ಮಲಾರ್, ನೌಶಾದ್ ಊಲ್‌ಮಾರ್ಟ್, ಜೆರಾಲ್ಡ್ ಬ್ರಾಕ್ಸೃ್, ಜಾಫರ್, ಇಮ್ರಾನ್, ರಿಯಾಝ್, ಇಮ್ತಿಯಾಝ್, ನೌಫಲ್, ನೌಝೀಲ್, ನಾಝಿಮ್ ಟಿ.ಎಚ್, ಅನ್ವರ್, ಇಸ್ತಾರ್, ರಿಝ್ವಾನ್, ನಿಯಾಝ್, ಹನೀಫ್ ಕುಂಜತ್ತೂರು, ನಿಸಾರ್, ಶಬೀರ್, ಉಳಿಯ ಇನ್‌ಫೆಂಟ್ ಜೀಸಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News