ವೇಗವಾಗಿ ಚಲಿಸುತ್ತಿರುವ ಭೂಮಿಯ ಕಾಂತೀಯ ಉತ್ತರ ಧ್ರುವದ ಸ್ಥಾನ

Update: 2019-02-07 16:27 GMT

ವಾಶಿಂಗ್ಟನ್, ಫೆ. 7: ಭೂಮಿಯ ಕಾಂತೀಯ ಉತ್ತರ ಧ್ರುವದ ಸ್ಥಾನವು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತಿದೆ. ಹಾಗಾಗಿ, ಹೊಸ ಕಾಂತೀಯ ಸ್ಥಾನವನ್ನು ಗುರುತಿಸುವುದಕ್ಕಾಗಿ ವಿಜ್ಞಾನಿಗಳು ಈ ವಾರ ಪ್ರಯತ್ನಿಸುತ್ತಿದ್ದಾರೆ.

ಕಾಂತೀಯ ಉತ್ತರ ಧ್ರುವವೆಂದರೆ, ಭೂಮಿಯ ಕಾಂತೀಯ ಕ್ಷೇತ್ರವು ಲಂಬವಾಗಿ ಕೆಳಗೆ ತೂಗುವ ಬಿಂದು. ಸಮುದ್ರ ಸಂಚಾರ, ಸೇನೆ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಈ ಅಂಶವನ್ನು ಮುಖ್ಯವಾಗಿ ಬಳಸಲಾಗುತ್ತಿದೆ.

 ಉತ್ತರ ಧ್ರುವ ಸ್ಥಾನವನ್ನು ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಆದರೆ, ‘ಆರ್ಕ್‌ಟಿಕ್ ವಲಯದಲ್ಲಿನ ಅನಿರೀಕ್ಷಿತ ವ್ಯತ್ಯಯ’ಗಳಿಂದಾಗಿ ಒಂದು ವರ್ಷ ಮುಂಚಿತವಾಗಿಯೇ ಪರಿಷ್ಕರಿಸಬೇಕಾದ ಅಗತ್ಯ ತಲೆದೋರಿದೆ ಎಂದು ಅಮೆರಿಕ ರಾಷ್ಟ್ರೀಯ ಪರಿಸರ ಮಾಹಿತಿ ಕೇಂದ್ರ ನೀಡಿರುವ ಹೇಳಿಕೆಯೊಂದು ತಿಳಿಸಿದೆ.

ಉತ್ತರ ಧ್ರುವ ಸ್ಥಾನವನ್ನು ಉತ್ತರ ಕೆನಡದಲ್ಲಿ 1831ರಲ್ಲಿ ಪತ್ತೆಹಚ್ಚಲಾಗಿತ್ತು. ಕೆನಡದಲ್ಲೇ ಬಹುಕಾಲ ಕೇಂದ್ರೀಕೃತವಾಗಿದ್ದ ಈ ಚಲಿಸುವ ಬಿಂದು ಈ ವರ್ಷ 55 ಕಿಲೋಮೀಟರ್‌ನಷ್ಟು ಚಲಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News