ಫೆ.8: ಶಿಕ್ಷಣ ಸಚಿವರನ್ನು ನೇಮಿಸದೆ ಬಜೆಟ್ ಮಂಡನೆ ವಿರುದ್ಧ ಸಿಎಫ್‌ಐ ಪ್ರತಿಭಟನೆ
Update: 2019-02-07 22:00 IST
ಮಂಗಳೂರು, ಫೆ.7: ಶಿಕ್ಷಣ ಸಚಿವರನ್ನು ಈವರೆಗೂ ನೇಮಿಸದೆ ರಾಜ್ಯ ಸರಕಾರವು ಫೆ.8ರಂದು ಮಂಡಿಸಲಿರುವ ಬಜೆಟ್ ಅನ್ನು ಖಂಡಿಸಿ ಸಿಎಫ್‌ಐ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.
ಶಿಕ್ಷಣ ಸಚಿವರಾಗಿದ ಎನ್. ಮಹೇಶ್ ರಾಜೀನಾಮೆ ನೀಡಿ ನಾಲ್ಕು ತಿಂಗಳು ಕಳೆದರೂ ಕೂಡೋ ಈವರೆಗೂ ನೂತನ ಶಿಕ್ಷಣ ಸಚಿವರನ್ನು ಸರಕಾರ ನೇಮಿಸಿಲ್ಲ. ಫೆ.8ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೊಸ ಯೋಜನೆಯ ಪ್ರಸ್ತಾವನೆಗಳನ್ನು ನೀಡಲು ಸಚಿವರೇ ಇಲ್ಲದಂತಾಗಿದೆ, ಇದು ಸರಕಾರಕ್ಕೆ ಶಿಕ್ಷಣದ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ. ಮುಖ್ಯಮಂತ್ರಿ ದೂರದೃಷ್ಟಿಯಿಲ್ಲದೆ ಆಶ್ವಾಸನೆಗಳನ್ನು ನೀಡಿ ಜನರ ಮುಂದೆ ಅಪಹಾಸ್ಯಕ್ಕೀಡಾಗುತ್ತಿದ್ದಾರೆ ಎಂದು ಸಿಎಫ್‌ಐ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.