×
Ad

ದುಬೈಗೆ ಅಕ್ರಮ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನ: ಒಬ್ಬ ಸೆರೆ

Update: 2019-02-07 22:17 IST

ಮಂಗಳೂರು, ಫೆ.7: ನಗರದಿಂದ ಏರ್ ಇಂಡಿಯಾ ಎಕ್ಸೃ್ಪ್ರೆಸ್ ವಿಮಾನದ ಮೂಲಕ ದುಬೈಗೆ ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಿಸಲು ಪ್ರಯತ್ನಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ಅಬ್ದುಲ್ ಹಮೀದ್ ಕೊಡಿಯಮ್ಮ ಎಂದು ಗುರುತಿಸಲಾಗಿದೆ.

ಈತ ದುಬೈಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ವೇಳೆ ತಪಾಸಣೆ ಸಂದರ್ಭ ಧರಿಸಿದ್ದ ವಸ್ತ್ರದಲ್ಲಿ ಸಂಶಯಾತ್ಮಕ ವಸ್ತು ಕಂಡು ಬಂತು. ತಕ್ಷಣ ಹೆಚ್ಚಿನ ತಪಾಸಣೆಗಾಗಿ ಅಧಿಕಾರಿಗಳು ಕೊಠಡಿಗೆ ಕರೆದೊಯ್ದ ಪರಿಶೀಲಿಸಿದಾಗ ಒಳ ಉಡುಪಿನಲ್ಲಿ 5,000 ಡಾಲರ್ ಮೌಲ್ಯದ 2 ಬಂಡಲ್ ಯುಎಸ್‌ಎ ಡಾಲರ್ ಪತ್ತೆಯಾಗಿದೆ. ಇವುಗಳ ಮೌಲ್ಯ 7 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್ಚಿನ ತನಿಖೆಗಾಗಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ವಿಚಾರಣೆಗೆ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News