ರಾಜ್ಯಮಟ್ಟದ ಪಾರಂಪರಿಕ ಕಾವಿ ಚಿತ್ತಾರ ಕಾರ್ಯಾಗಾರ
ಉಡುಪಿ, ಫೆ.8: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಮೊದಲ ರಾಜ್ಯಮಟ್ಟದ ಪಾರಂಪರಿಕ ಕಾವಿ ಚಿತ್ತಾರ ಕಾರ್ಯಾಗಾರವನ್ನು ಫೆ.10ರಿಂದ 13ರವರೆಗೆ ಕುಂದಾಪುರದ ಮೂಡಲಕಟ್ಟೆ ದೊಡ್ಡಮನೆಯಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಲಲಿತಕಲಾ ಅಕಾಡೆಮಿ ಸದಸ್ಯರು ಸೇರಿದಂತೆ ಒಟ್ಟು 20 ಕಲಾವಿದರು ಭಾಗವಹಿಸಲಿರುವರು. ಅದೇ ರೀತಿ ಜಿಲ್ಲೆಯ ನಾಲ್ಕು ಸ್ವಯಂ ಪ್ರೇರಿತ ಕಲಾವಿದರು, ಶಾಲಾಕಾಲೇಜಿನ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿರು ವರು ಎಂದು ಅಕಾಡೆಮಿಯ ಸದಸ್ಯ ಸಂಚಾಲಕ ರಾಘವೇಂದ್ರ ಕೆ.ಅಮೀ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ಫೆ.10ರಂದು ಬೆಳಿಗ್ಗೆ 10ಗಂಟೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಾಗಾರವನ್ನು ಉದ್ಘಾಟಿಸಲಿರು ವರು. ಅಕಾಡೆಮಿಯ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಅಧ್ಯಕ್ಷತೆ ವಹಿಸಲಿರು ವರು. ಫೆ.13ರಂದು ಮಧ್ಯಾಹ್ನ 3ಗಂಟೆಗೆ ನಡೆಯುವ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಉಡುಪಿಯ ಹಿರಿಯ ಕಲಾವಿದ ಕೆ.ಎಲ್.ಭಟ್ ಅವರನ್ನು ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಜಾನಪದ ತಜ್ಞ ಪ್ರೊ.ಎಸ್.ಎ. ಕೃಷ್ಣಯ್ಯ ಉಪಸ್ಥಿತರಿದ್ದರು.