×
Ad

ಶಿಕ್ಷಣ ಸಚಿವರನ್ನು ನೇಮಿಸದೆ ಬಜೆಟ್ ಮಂಡನೆ ಖಂಡನೀಯ: ಸವಾದ್ ಕಲ್ಲರ್ಪೆ

Update: 2019-02-08 17:53 IST

ಪುತ್ತೂರು, ಫೆ. 8: ರಾಜ್ಯದಲ್ಲಿ ಶಿಕ್ಷಣ ಸಚಿವರನ್ನು ನೇಮಿಸದೆ ಬಜೆಟ್ ಮಂಡಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯವಾಗಿದ್ದು, ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಸಂಪುಟ ವಿಸ್ತರಣೆಯಾಗಿದ್ದರೂ ಅತೀ ಅಗತ್ಯವಾಗಿರುವ ಶಿಕ್ಷಣ ಖಾತೆಯ ಸಚಿವರ ನೇಮಕಗೊಳಿಸದೆ ಇದೀಗ ಬಜೆಟ್ ಮಂಡನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸವಾದ್ ಕಲ್ಲರ್ಪೆ ತಿಳಿಸಿದ್ದಾರೆ.

ಅವರು ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಬಜೆಟ್ ಮಂಡನೆ ವಿರೋಧಿಸಿ ಹಾಗೂ ಶೈಕ್ಷಣಿಕ ಬೇಡಿಕೆಗಳಿಗೆ ಆಗ್ರಹಿಸಿ ಶುಕ್ರವಾರ ಪುತ್ತೂರಿನ ದರ್ಬೆ ಕಾವೇರಿಕಟ್ಟೆಯ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಶಿಕ್ಷಣ ಸಚಿವರಾದ ಎನ್ ಮಹೇಶ್ ರಾಜೀನಾಮೆ ನೀಡಿ ನಾಲ್ಕು ತಿಂಗಳುಗಳೇ ಕಳೆಯಿತು. ಅದರ ನಂತರ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಶಿಕ್ಷಣ ಇಲಾಖೆಗೆ ಇನ್ನೂ ಸಚಿವರನ್ನು ನೇಮಿಸಿಲ್ಲ , ಇದರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೂ ಸಚಿವರನ್ನು ನೇಮಿಸದೆ ಶಿಕ್ಷಣ ಇಲಾಖೆಗೆ ದ್ರೋಹ ಬಗೆಯುತ್ತಿದ್ದಾರೆ. ಅದೇ ರೀತಿ ಸಚಿವರನ್ನು ನೇಮಿಸದೆ ಇದೀಗ ಬಜೆಟ್ ಮಂಡನೆ ಮಾಡಲು ಹೊರಟಿರುವುದು ಖಂಡನೀಯ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ರಿಯಾಝ್ ಅಂಕತಡ್ಕ, ಸದಸ್ಯ ಅಫ್ರೀದ್ ಕೂರ್ನಡ್ಕ,ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಪುತ್ತೂರು ತಾಲೂಕು ಅಧ್ಯಕ್ಷರಾದ ಸಾಬಿತ್,ಕ್ಯಾಂಪಸ್ ಫ್ರಂಟ್ ಫಿಲೋಮಿನ ಕಾಲೇಜು ಘಟಕದ ಅಧ್ಯಕ್ಷರಾದ ಆಸಿಫ್,ಕಾರ್ಯದರ್ಶಿ ಇಲ್ಯಾಸ್, ನಗರ ಸಮಿತಿ ಸದಸ್ಯ ಅಮ್ಸೀರ್ ಕೂರ್ನಡ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸವಣೂರಿನಲ್ಲಿ ಪ್ರತಿಭಟನೆ

ಕ್ಯಾಂಪಸ್ ಫ್ರಂಟ್ ಸವಣೂರು ವಲಯದ ವತಿಯಿಂದ ಸವಣೂರಿನಲ್ಲೂ ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಯಿತು. ವಲಯ ಕಾರ್ಯದರ್ಶಿ ಹುಸೈನ್ ಮಾಡವು ಮಾತನಾಡಿದರು. ಈ ಸಂದರ್ಭದಲ್ಲಿ ವಲಯ ಸಮಿತಿ ಸದಸ್ಯರಾದ ಇರ್ಶಾದ್ ಮಾಡಾವು, ನಿಝಾಮು ಬೆಳ್ಳಾರೆ , ಅನ್ಸೀಫ್ ಕೂರ್ನಡ್ಕ ಹಾಗೂ ಹಲವು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News