×
Ad

ಉಡುಪಿ: ಬೆಳಕು ಮೀನುಗಾರಿಕೆಗೆ ನಿಷೇಧ

Update: 2019-02-08 20:44 IST

ಉಡುಪಿ, ಫೆ.8: ಬೆಳಕು ಮೀನುಗಾರಿಕೆಗೆ ಸಂಬಂಧಿಸಿದಂತೆ, ಫೆ.6ರ ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ಮಧ್ಯಂತರ ಆದೇಶದಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಇವರ ಆದೇಶಾನುಸಾರ ಬೆಳಕು ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅದರಂತೆ ಜಿಲ್ಲೆಯ ಎಲ್ಲಾ ಮೀನುಗಾರರು ಬೆಳಕು ಮೀನುಗಾರಿಕೆಗಾಗಿ ದೋಣಿಗಳಲ್ಲಿ ಅಳವಡಿಸಿರುವ ಜನರೇಟರ್‌ಗಳನ್ನು ತಕ್ಷಣದಿಂದಲೇ ತೆರವು ಗೊಳಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಬೆಳಕು ಮೀನುಗಾರಿಕೆಯನ್ನು ನಡೆಸಬಾರದು. ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆಗೆ ತೆರಳುವುದು ಕಂಡುಬಂದಲ್ಲಿ ಅಂತಹ ಮೀನುಗಾರಿಕಾ ದೋಣಿಗಳ ಲೈಸನ್ಸ್‌ನ್ನು ರದ್ದುಗೊಳಿಸಲಾಗುವುದು. ಅಲ್ಲದೆ ಅಂಥ ದೋಣಿಗೆ ಡೀಸೆಲ್ ಸರಬರಾಜನ್ನು ತಡೆಹಿಡಿಯಲಾಗುವುದು.

ಅದರಂತೆ ಜಿಲ್ಲೆಯ ಎಲ್ಲಾ ಮೀನುಗಾರರು ಬೆಳಕು ಮೀನುಗಾರಿಕೆಗಾಗಿ ದೋಣಿಗಳಲ್ಲಿ ಅಳವಡಿಸಿರುವ ಜನರೇಟರ್‌ಗಳನ್ನು ತಕ್ಷಣದಿಂದಲೇ ತೆರವು ಗೊಳಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಬೆಳಕು ಮೀನುಗಾರಿಕೆಯನ್ನು ನಡೆಸಬಾರದು. ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆಗೆ ತೆರಳುವುದು ಕಂಡುಬಂದಲ್ಲಿ ಅಂತಹ ಮೀನುಗಾರಿಕಾ ದೋಣಿಗಳ ಲೈಸನ್ಸ್‌ನ್ನು ರದ್ದುಗೊಳಿಸಲಾಗುವುದು. ಅಲ್ಲದೆ ಅಂಥ ದೋಣಿಗೆ ಡೀಸೆಲ್ ಸರಬರಾಜನ್ನು ತಡೆಹಿಡಿಯಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲಾ ಮೀನುಗಾರರು ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಗೌರವಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಉಪನಿರ್ದೇಶಕ ಪಾರ್ಶ್ವನಾಥ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News