ಎ.ಈಶ್ವರಯ್ಯ ಸ್ಮಾರಕ ಛಾಯಾಚಿತ್ರ ಪ್ರಶಸ್ತಿ ಪ್ರದಾನ
ಉಡುಪಿ, ಫೆ.8: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಸಿನಿಮಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಈ ಸಂಬಂಧ ನಡೆಸಲಾದ ಎ.ಈಶ್ವರಯ್ಯ ಸ್ಮಾರಕ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಭರತ್ ಕಂಡಕೂರ್ ಪ್ರಥಮ, ಸುರತ್ಕಲ್‌ನ ಕಾರ್ತಿಕ್ ಎಂ.ಡಿ. ದ್ವಿತೀಯ ಹಾಗೂ ಮಂಗಳೂರಿನ ದೀಕ್ಷಿತ್ ಪೈ ತೃತೀಯ ಬಹುಮಾನವನ್ನು ಪಡೆದುಕೊಂಡರು. ಪ್ರಶಸ್ತಿ ಪ್ರದಾನ ಮಾಡಿದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಮಾತನಾಡಿ, ಉತ್ತಮ ಫೋಟೋಗ್ರಾಫರ್ ಆಗಲು ಹೃದಯ ಶುದ್ಧತೆ ಮುಖ್ಯ. ಹಿಂದೆ ಹೃದಯ ಮುಟ್ಟುವ ಫೋಟೋಗಳು ಇಂದು ಕೇವಲ ತಾಂತ್ರಿಕತೆಯ ಪರಿಣಾಮ ಕೇವಲ ಮನಸ್ಸು ಮಾತ್ರ ಮುಟ್ಟುತ್ತಿವೆ ಎಂದರು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಫೋಕಸ್ ಸ್ಟುಡಿಯೋದ ಫೋಕಸ್ ರಾಘು ಮಾತನಾಡಿದರು. ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಮಂಜುನಾಥ್ ಕಾಮತ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜು ಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಿದ್ದರು. ಕಾಲೇಜಿನ ಪತ್ರಿ ಕೋದ್ಯಮ ಉಪನ್ಯಾಸಕ ಸುಜಿತ್ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿ ನಿತೀಶ್ ಕಾರ್ಯಕ್ರಮ ನಿರೂಪಿಸಿದರು.