ಫೆ.9ರಂದು ಉಡುಪಿ ಅಲ್ ಹಿಕ್ಮಾ ಗೈಡೆನ್ಸ್ ಸೆಂಟರ್ ವತಿಯಿಂದ ಪ್ರವಚನ
Update: 2019-02-08 21:40 IST
ಉಡುಪಿ, ಫೆ.8: ಉಡುಪಿ ಅಲ್ ಹಿಕ್ಮಾ ಗೈಡೆನ್ಸ್ ಸೆಂಟರ್ ವತಿಯಿಂದ ಜಮೀಯತೆ ಅಹ್ಲೆ ಹದೀಸ್ ಮಾರ್ಗದರ್ಶನದಲ್ಲಿ ವಿಶ್ವ ವಿಖ್ಯಾತ ಧಾರ್ಮಿಕ ವಿದ್ವಾಂಸ ಹಾಗೂ ದುಬೈಯ ಮರ್ಕಝ್ ಉದ್ ದಾವ ವಲ್‌ನ ಪ್ರವಚಕ ಶೇಕ್ ಝಫರುಲ್ ಹಸನ್ ಮದನಿ ಅವರಿಂದ ‘ಏಳು ಸರ್ವನಾಶ ಮಾಡುವ ಪಾಪಗಳು’ ವಿಷಯದ ಕುರಿತ ಪ್ರವಚನ ಕಾರ್ಯಕ್ರಮವು ಫೆ.9ರಂದು ರಾತ್ರಿ 9ಗಂಟೆಗೆ ಹೂಡೆ ಉರ್ದು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.