ಉಡುಪಿ: ಕ್ರೈಸ್ತ ಒಕ್ಕೂಟ ಅಭಿನಂದನೆ
Update: 2019-02-08 21:44 IST
ಉಡುಪಿ, ಫೆ. 8: ಕ್ರೈಸ್ತ ಸಮುದಾಯದ ಬಹುಬೇಡಿಕೆಯಾದ ಕ್ರೈಸ್ತ ಅಭಿವೃದ್ಧಿ ನಿಗಮವನ್ನು 200 ಕೋಟಿ ರೂ. ಅನುದಾನದ ಘೋಷಣೆಯೊಂದಿಗೆ ಸ್ಥಾಪಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ. ಜಾರ್ಜ್, ಮಾಜಿ ಶಾಸಕ ಜೆ.ಆರ್. ಲೋಬೊ ಹಾಗೂ ಸಂಸದೀಯ ಕಾರ್ಯ ದರ್ಶಿ ಐವನ್ ಡಿಸೋಜ ಅವರಿಗೆ ಕರ್ನಾಟಕ ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಅಭಿನಂದನೆ ಸಲ್ಲಿಸಿದ್ದಾರೆ.