ತೆಂಗಿನ ಮರದಿಂದ ಬಿದ್ದು ಮೃತ್ಯು
Update: 2019-02-08 22:03 IST
ಹೆಬ್ರಿ, ಫೆ.8: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ಬೆಂಡುಗುಡ್ಡೆ ಎಂಬಲ್ಲಿ ಫೆ.8ರಂದು ಸಂಜೆ 5.30ರ ಸುಮಾರಿಗೆ ನಡೆದಿದೆ.
ಮೃತರನ್ನು ಮುದ್ರಾಡಿ ಗ್ರಾಮದ ಬಲ್ಲಾಡಿಯ ಬೆಂಡುಗುಡ್ಡೆ ನಿವಾಸಿ ಹರಿಪ್ರಸಾದ್(29) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ತೋಟದಲ್ಲಿರುವ ತೆಂಗಿನ ಮರ ಹತ್ತಿ ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ ಅಕಸ್ಮಿಕ ವಾಗಿ ಕೈ ಜಾರಿ ಸುಮಾರು 35 ಅಡಿ ಮೇಲಿಂದ ಕೆಳಗೆ ಕಲ್ಲು ಬಂಡೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.