ಬೈಕ್ ಸ್ಕಿಡ್: ಸವಾರ ಮೃತ್ಯು
Update: 2019-02-08 22:06 IST
ಕುಂದಾಪುರ, ಫೆ.8: ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಫೆ. 7ರಂದು ಬೆಳಗ್ಗೆ ಕೊಟೇಶ್ವರ ಗ್ರಾಮದ ಅರಳುಗುಡ್ಡೆ ರಸ್ತೆಯ ಶ್ರೀಹೈಗುಳಿ ಬೊಬ್ಬರ್ಯ ದೈವಸ್ಥಾನದ ತಿರುವಿನಲ್ಲಿ ನಡೆದಿದೆ.
ಮೃತರನ್ನು ಸತೀಶ್ ಎಂದು ಗುರುತಿಸಲಾಗಿದೆ. ಕೊಟೇಶ್ವರ ಕಡೆಯಿಂದ ಹಳೆ ಅಳಿವೆ ಕಡೆಗೆ ಹೋಗುತ್ತಿದ್ದ ಬೈಕ್ ಸವಾರನ ನಿರ್ಲಕ್ಷದಿಂದ ಸ್ಕಿಡ್ ಆಗಿ ಬಿತ್ತೆನ್ನ ಲಾಗಿದೆ. ಗಂಭೀರವಾಗಿ ಗಾಯಗೊಂಡ ಸತೀಶ್ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.