ಮಂಗಳೂರು: ಫೆ. 10ರಂದು 'ಎಸ್ಒಟಿಸಿ ಹಾಲಿಡೇ ಬಝಾರ್'
ಮಂಗಳೂರು, ಫೆ. 9: ನಗರದ ಗೇಟ್ ವೇ ಹೊಟೇಲ್‌ನಲ್ಲಿ ಫೆ. 10ರಂದು ‘ಎಸ್ಒಟಿಸಿ ಹಾಲಿಡೇ ಬಝಾರ್’ ನಡೆಯಲಿದೆ.
ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಈ ಹಾಲಿಡೇ ಬಝಾರ್ ನಡೆಯಲಿದ್ದು, ವಿಶೇಷ ಕೊಡುಗೆಗಳು, ಆಕರ್ಷಕ ರಿಯಾಯಿತಿ ಹಾಗೂ ಅತ್ಯಮೂಲ್ಯ ಹಾಲಿಡೇ ಅನುಭವವನ್ನು ಪಡೆಯಬಹುದಾಗಿದೆ.
ಕಳೆದ 70 ವರ್ಷಗಳ ಅವಧಿಯಲ್ಲಿ ನಾವು ಲಕ್ಷಾಂತರ ಭಾರತೀಯರಿಗೆ ವಿಶ್ವವನ್ನು ಪರಿಚಯಿಸಿದ್ದೇವೆ. ಈ 70 ದಶಕಗಳ ಯಶಸ್ಸನ್ನು ಗ್ರಾಹಕರ ಜತೆ ಸಂಭ್ರಮಿಸಲು ಇಚ್ಚಿಸುತ್ತಿದ್ದು, ನಮ್ಮ ಬೇಸಿಗೆ ಕಾಲದ ಹಾಲಿಡೇ ಬಝಾರ್ ನಡಿ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆಯನ್ನು ನೀಡಲು ಬಯಸುತ್ತಿದ್ದೇವೆ ಎಂದು ಎಸ್‌ಒಟಿಸಿ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ರಜಾ ದಿನಗಳಲ್ಲಿ ವಿವಿಧ ಕಡೆಗಳಲ್ಲಿ ಪ್ರವಾಸ ಹೋಗಲು ಬಯಸುವ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸಾಹಸಿಗಳಿಗೆ, ಸಮುದ್ರಯಾನ, ವಿಮಾನಯಾನ ಹಾಗೂ ರಸ್ತೆ ಮೂಲಕ ಯೂರೋಪ್, ಅಮೆರಿಕ, ಏಷ್ಯ, ಆಸ್ಟ್ರೇಲಿಯಾ, ಮಾಲ್ಡೀವ್ಸ್, ನ್ಯೂಝಿಲ್ಯಾಂಡ್, ಈಜಿಪ್ಟ್, ಜಪಾನ್, ಆಫ್ರಿಕ, ಮಾಲ್ಡೀವ್ಸ್, ಚೀನ ಹಾಗೂ ಭಾರತದ ವಿವಿಧೆಡೆ ಪ್ರವಾಸ ಮಾಡಲಿಚ್ಚಿಸುವವರಿಗೆ ಒಂದು ದಿನದ ಬುಕ್ಕಿಂಗ್ ಅವಕಾಶವನ್ನು ಈ ಒಸ್‌ಒಟಿಸಿ ಹಾಲಿಡೇ ಬಝಾರ್ ನಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಬಲ್ಮಠದಲ್ಲಿರುವ ಸೋಜ ಆರ್ಕೇಡ್ ಕಚೇರಿ (ದೂ.ಸಂ.- 0824- 4244911-13/9845112681)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.