×
Ad

ಕಾಂತಾವರ: ಉಚಿತ ಆಯುಷ್ ತಪಾಸಣಾ, ಚಿಕಿತ್ಸಾ ಶಿಬಿರ

Update: 2019-02-09 18:56 IST

ಉಡುಪಿ, ಫೆ.9: ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ಗ್ರಾಪಂ ಕಾಂತಾವರ ಮತ್ತು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಂತಾವರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುಷ್ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕಾಂತಾವರ ಕನ್ನಡ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಜಿಪಂ ಸದಸ್ಯೆ ದಿವ್ಯಶ್ರೀ ಗಿರೀಶ್ ಆಮೀನ್ ಉದ್ಘಾಟಿಸಿ, ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಮಹತ್ವ ತಿಳಿಸಿದರು. ಮುಖ್ಯ ಅತಿಥಿ ಯಾಗಿ ಆಗಮಿಸಿದ್ದ ಗ್ರಾಪಂನ ಹಾಲಿ ಸದಸ್ಯ ಹಾಗೂ ನಿಕಟಪೂರ್ವ ಅಧ್ಯಕ್ಷ ರಾದ ಜಯಶ್ರೀ ಎಸ್ ಕೋಟ್ಯಾನ್ ಮಾತನಾಡಿ, ಹೆಚ್ಚು ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.

ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಡಾ.ಶೃತಿ, ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಪುಷ್ಪಾಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಶಕುಂತಲಾ ಶೆಟ್ಟಿ, ಕಾರ್ಯದರ್ಶಿ ಜಯಕರ್ ಉಪಸ್ಥಿತರಿದ್ದರು.

ಸರಕಾರಿ ಆಯುರ್ವೇದ ಚಿಕಿತ್ಸಾಲಯ ಸೋಮೇಶ್ವರದ ವೈದ್ಯಾಧಿಕಾರಿ ಡಾ.ನೀತಾ ಜೋಗನ್ ಕಾರ್ಯಕ್ರಮ ನಿರೂಪಿಸಿ, ಕಾಂತಾವರದ ವೈದ್ಯಾಧಿಕಾರಿ ಡಾ.ಸಂ್ಯಾ ಕುಮಾರಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News