ಕೌಶಲ್ಯಾಧಾರಿತ ಆರೋಗ್ಯ ಸೇವೆ ಕೋರ್ಸು ಪ್ರಾರಂಭ
ಉಡುಪಿ, ಫೆ.9: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗ ದೊಂದಿಗೆ ಕೌಶಲ್ಯಾಧಾರಿತ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ನಾಲು ್ಕ ಕೋರ್ಸುಗಳನ್ನು ಪ್ರಾರಂಭಿಸಿದೆ.
ಈ ಕೋರ್ಸುಗಳು ದೇಶದಾದ್ಯಂತ ಅರೋಗ್ಯ ಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದಾದ ತರಬೇತಿ ಪಡೆದ ಸಿಬ್ಬಂದಿಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ. ಕೋರ್ಸುಗಳ ವಿವರ: ಸರ್ಟಿಫಿಕೇಟ್ ಇನ್ ಜನರಲ್ ಡ್ಯೂಟಿ ಅಸಿಸ್ಟೆಂಟ್, ಸರ್ಟಿಫಿಕೇಟ್ ಇನ್ ಜಿರಿಯಾಟ್ರಿಕ್ ಕೇರ್ ಅಸಿಸ್ಟೆಂಟ್, ಸರ್ಟಿಫಿಕೇಟ್ ಇನ್ ಪೆಬೊಟಮಿ ಅಸಿಸ್ಟೆಂಟ್ ಮತ್ತು ಸರ್ಟಿಫಿಕೇಟ್ ಇನ್ ಹೋಮ್ ಅಸಿಸ್ಟೆಂಟ್. ಜೀವಶಾಸ್ತ್ರ ವಿಷಯದೊಂದಿಗೆ 12ನೇ ತರಗತಿ (ಪಿಯುಸಿ) ತೇರ್ಗಡೆ ಗೊಂಡ ಅ್ಯರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಪ್ರವೇಶ ಪಡೆಯಲು ಫೆ.11 ಕೊನೆಯ ದಿನವಾಗಿದ್ದು, ಆಸಕ್ತರು ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಬಹುದು.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್- www.ignou.ac.in- ಅಥವಾ ದೂ.ಸಂಖ್ಯೆ:080-26654747ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.