ಬೈಂದೂರು: ಕೇಂದ್ರ ಬಜೆಟ್ ವಿಶ್ಲೇಷಣೆ
ಉಡುಪಿ, ಫೆ.9: ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಬಜೆಟ್‌ನ ಜ್ಞಾನ ಪ್ರತಿ ಯೊಬ್ಬರಿಗೂ ಅತೀ ಅವಶ್ಯಕ ಎಂದು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾುಪಾಲ ಪ್ರೊ.ಬಿ.ಎ.ಮೇಳಿ ಹೇಳಿದ್ದಾರೆ.
ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ನಡೆದ 2019-20ನೇ ಸಾಲಿನ ಕೇಂದ್ರ ಬಜೆಟ್ ವಿಶ್ಲೇಷಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ವಿಭಾಗದ ಪ್ರಾಧ್ಯಾಪಕ ನವೀನ್ ಎಚ್.ಜೆ.ಮಾತನಾಡಿ, ಬಜೆಟ್ ಬಗೆಗಿನ ಜ್ಞಾನ ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುತ್ತದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಗಿರೀಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಲೋಕೇಶ್, ಕವಿತ, ಅನೂಪ್, ಮೇಘನಾ, ಅನುಷಾ 2019-20ನೇ ಸಾಲಿನ ಬಜೆಟ್ ವಿಶ್ಲೇಷಣೆ ಮಾಡಿದರು.
ಅರ್ಥಶಾಸ್ತ್ರ ವಿಾಗದಸಹಾಯಕಪ್ರ್ಯಾಾಪಕ ಗಿರೀಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಲೋಕೇಶ್, ಕವಿತ, ಅನೂಪ್, ಮೇಘನಾ, ಅನುಷಾ 2019-20ನೇ ಸಾಲಿನ ಬಜೆಟ್ ವಿಶ್ಲೇಷಣೆ ಮಾಡಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಶ್ವತ್ ದೇವರಾಯ ನಾಯ್ಕ, ಉಪನ್ಯಾಸಕ ಜ್ಯೋತಿ ಬಂಗೇರ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಂಗೀತ ಎಂ ಕಾರ್ಯಕ್ರಮ ನಿರೂಪಿಸಿದರು.