ಸುರತ್ಕಲ್: ಸಂತೆ ವ್ಯಾಪಾರಸ್ಥರ ಒಕ್ಕೂಟದ ಸಮಾವೇಶ
ಮಂಗಳೂರು, ಫೆ. 9: ಇಂಟಕ್ ಸಂಘಟನೆಯ ಅಧೀನದಲ್ಲಿರುವ ಸುರತ್ಕಲ್ ಸಂತೆ ವ್ಯಾಪಾರಸ್ಥರ ಒಕ್ಕೂಟದ ಪ್ರಥಮ ಸಮಾವೇಶವು ಸುರತ್ಕಲ್‌ನಲ್ಲಿ ಶುಕ್ರವಾರ ಜರುಗಿತು. ಮೇಯರ್ ಭಾಸ್ಕರ ಕೆ ಸಮಾವೇಶ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಸಂತೆ ವ್ಯಾಪಾರವು ಜನರ ಜೀವನಾಡಿಯಾಂತಿತ್ತು. ಒಂದೇ ಕಡೆ ಜನರಿಗೆ ನಿತ್ಯದ ಬಳಕೆಯ ವಸ್ತುಗಳು ಸಿಗುತ್ತಿದ್ದವು. ಈಗಲೂ ಸಂತೆ ವ್ಯಾಪಾರ ಮುಂದುವರಿದುಕೊಂಡು ಬಂದಿದೆ. ಸುರತ್ಕಲ್ನಲ್ಲಿ ರವಿವಾರ ಮತ್ತು ಬುಧವಾರ ಸಂತೆ ವ್ಯಾಪಾರ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಪರಿಸರವನ್ನು ಶುಚಿಯಾಗಿಟ್ಟುಕೊಂಡು ವ್ಯಾಪಾರಿಗಳು ಜನರಿಗೆ ತೊಂದರೆಯಾಗದಂತೆ ನಡೆಸಿಕೊಂಡು ಬರಬೇಕು ಎಂದರು.
ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಲಿಕೆಯ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ, ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಪಣಂಬೂರು ಎಸಿಪಿ ಶ್ರೀನಿವಾಸ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ.ಕೆ., ರಾಜ್ಯ ಕಾರ್ಯದರ್ಶಿ ಅಬೂಬಕರ್ ಕೃಷ್ಣಾಪುರ, ವೈ. ರಮಾನಂದ ರಾವ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ವಿನೋದ್ ರಾಜ್ ಪಣಂಬೂರ್, ಫಾರೂಕ್, ರಿತೇಶ್, ಶೇಖರ್, ಜಾನ್ ಡಿಸೋಜ, ಸ್ಟೀವನ್ ಡಿಸೋಜ, ಸಂತೆ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಬದ್ರುದ್ದೀನ್, ಮತ್ತಿತರರು ಉಪಸ್ಥಿತರಿದ್ದರು.
ಕಾನೂನು ಸಲಹೆಗಾರ ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.