25 ಶಾಲೆಗಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಬರ್ನಿಂಗ್ ಯಂತ್ರಗಳ ವಿತರಣೆ
ಉಡುಪಿ, ಫೆ.9: ಅಂಬಲಪಾಡಿ ರೋಟರಿ ಕ್ಲಬ್ ವತಿಯಿಂದ ಉಡುಪಿ ಪರಿಸರದ 25 ಶಾಲೆಗಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಬರ್ನಿಂಗ್ ಯಂತ್ರಗಳ ವಿತ ರಣಾ ಸಮಾರಂಭವು ಶುಕ್ರವಾರ ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಯಂತ್ರಗಳನ್ನು ವಿತರಿಸಿದ ರೋಟರಿ ಜಿಲ್ಲೆ 3182 ಗವರ್ನರ್ ಅಭಿನಂದನ್ ಎ.ಶೆಟ್ಟಿ ಮಾತನಾಡಿ, ರೋಟರಿ ಸಂಸ್ಥೆಯು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಪ್ರಿಲ್ ತಿಂಗಳೊಳಗೆ ಮತ್ತೆ 25 ಶಾಲೆಗಳಿಗೆ ಇಂತಹ ಯಂತ್ರಗಳನ್ನು ನೀಡುವ ಬಗ್ಗೆ ಯೊೀಜನೆ ರೂಪಿಸಲಾಗುವುದು ಎಂದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶ್ಯಾಮ್‌ಪ್ರಸಾದ್ ಕುಡ್ವ, ದಾನಿಗಳಾದ ದೀಪಕ್ ಪ್ರಭು, ಕೃಷ್ಣಾನಂದ ಪ್ರಭು, ಸಹಾಯಕ ಗವರ್ನರ್ ಸುಬ್ಬಣ್ಣ ಪೈ, ವಲಯ ಪ್ರತಿನಿಧಿ ಅರುಣ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ. ಶುಭ ಹಾರೈಸಿದರು.
ಅಂಬಲಪಾಡಿ ರೋಟರಿ ಅಧ್ಯಕ್ಷ ಖಲೀಲ್ ಅಹ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ದುರ್ಗಾಪ್ರಸಾದ್ ವಂದಿಸಿದರು. ಶ್ರೀಶ ಆಚಾರ್ ಮತ್ತು ಅಶೋಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಮೆರಿಕಾದಲ್ಲಿ ನೆಲೆಸಿರುವ ವಸಂತ್ ಪ್ರಭು ತಮ್ಮ ತಾಯಿ ದಿ.ಶಾರದ ಪ್ರಭು ಸ್ಮರಣಾರ್ಥ ಹಾಗೂ ರೋಟರಿ ಸಹಾಯಕ ಗವರ್ನರ್ ಸುಬ್ಬಣ್ಣ ಪೈ ನೆರವಿನಿಂದ ಮತ್ತು ಸ್ಥಳೀಯ ರೋಟರಿ ಕ್ಲಬ್‌ಗಳ ಸಹಕಾರದಿಂದ ಈ ಮೆಷಿನ್‌ಗಳನ್ನು ವಿತರಿಸಲಾಯಿತು.