×
Ad

ಮಲ್ಪೆ ಮೀನುಗಾರರ ಸಂಘದಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ

Update: 2019-02-09 21:22 IST

ಉಡುಪಿ, ಫೆ. 9: ಕಳೆದ 56 ದಿನಗಳಿಂದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಈವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದು ಸಮುದ್ರದಲ್ಲಿ ನಮ್ಮ ದೇಶದ ರಕ್ಷಣೆ ಮಾಡು ತ್ತಿರುವ ನೌಕಪಡೆ ಹಾಗೂ ಕೋಸ್ಟ್‌ಗಾರ್ಡ್‌ಗಳ ವೈಫಲ್ಯ ಎಂದು ಮಲ್ಪೆ ಮೀನು ಗಾರರ ಸಂಘ ಆರೋಪಿಸಿದೆ.

ಇಷ್ಟು ದಿನಗಳಾದರೂ ಬೋಟು ಮತ್ತು ಮೀನುಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಇವರು ದೇಶವನ್ನು ಭಯೋತ್ಪಾದಕರಿಂದ ಯಾವ ರೀತಿ ರಕ್ಷಣೆ ಮಾಡುತ್ತಾರೆ ಎಂಬುದು ಗೊತ್ತಾಗಲ್ಲ. ನಾಪತ್ತೆಯಾದ ಏಳು ಮಂದಿ ಮೀನು ಗಾರರ ಮನೆಯವರು ಒಂದೊಂದು ದಿನವನ್ನು ಕೂಡ ಬಹಳ ಕಷ್ಟದಿಂದ ಕಳೆ ಯುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರದ ಜನಪ್ರತಿನಿಧಿಗಳು ಈ ಬಗ್ಗೆ ಕೇಳುವು ದನ್ನೇ ಮರೆತು ಬಿಟ್ಟಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ್ ಕುಂದರ್ ಹೇಳಿಕೆ ಯಲ್ಲಿ ಟೀಕಿಸಿದ್ದಾರೆ.

ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟು ಎಲ್ಲಿಗೆ ಹೋಯಿತು ಹಾಗೂ ಅದರಲ್ಲಿದ್ದ ಮೀನುಗಾರರು ಎಲ್ಲಿಗೆ ಹೋದರು ಎಂಬುದನ್ನು ಒಂದು ವಾರದೊಳಗೆ ಪತ್ತೆ ಹಚ್ಚಿ ತಿಳಿಸದಿದ್ದಲ್ಲಿ ರಾಜ್ಯಾದ್ಯಂತ ಮೀನುಗಾರರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನೌಕಾ ಪಡೆಯ ಹೇಳಿಕೆ ಬಗ್ಗೆ ಸಂಶಯ

ಸುವರ್ಣ ತ್ರಿಭುಜ ಬೋಟು ನಾಪತ್ತೆಯಾದ ದಿನ ಮತ್ತು ಅದೇ ಸಮಯ ದಲ್ಲಿ ಐ-ಎಸ್‌ಎಸ್ ಕೊಚ್ಚಿ ಎಂಬ ನೌಕಾಪಡೆಯ ಹಡಗಿನ ಅಡಿ ಭಾಗಕ್ಕೆ ಹಾನಿ ಯಾಗಿದೆ ಎಂದು ನೌಕಾ ಪಡೆಯವರು ಒಪ್ಪಿಕೊಂಡಿದ್ದರು ಮತ್ತು ಹಾನಿಯಾದ ಹಡಗಿನ ಚಿತ್ರವನ್ನು ನಾವು ನೋಡಿದ್ದೆವು. ಈ ಬಗ್ಗೆ ಶೋಧ ಕಾರ್ಯ ನಡೆಸಿದ್ದ ನೌಕಾಪಡೆಯು ಮಹಾರಾಷ್ಟ್ರದ ಮಾಲ್ವನ್‌ನ ಸಮುದ್ರದ ಆಳದಲ್ಲಿ 23 ಮೀಟರ್ ಉದ್ದದ ಬೋಟಿನಂತೆ ಹೋಲುವ ವಸ್ತು ಕಂಡುಬರುತ್ತಿದೆ ಎಂದು ತಿಳಿಸಿತ್ತು. ಆದರೆ ಇದೀಗ ಸಮುದ್ರದ 62 ಮೀಟರ್ ಆಳದಲ್ಲಿರುವುದು ಬೋಟು ಅಲ್ಲ, ಕಲ್ಲು ಬಂಡೆ ಎಂದು ಹೇಳಲಾಗುತ್ತಿದೆ. ಇದನ್ನು ನೋಡುವಾಗ ನಮಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಎಂಬ ಸಂಶಯ ಕಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News