×
Ad

ಮಸಾಜ್ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ಆರೋಪ: ಒಬ್ಬ ಸೆರೆ

Update: 2019-02-09 22:18 IST

ಮಂಗಳೂರು, ಫೆ.9: ನಗರದ ಅಶೋಕನಗರದಲ್ಲಿನ ಕಟ್ಟಡದ 2ನೇ ಅಂತಸ್ತಿನ ಕೊಠಡಿಯಲ್ಲಿ ‘ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೆರಫಿ ಎಂಬ ಮಸಾಜ್ ಪಾರ್ಲರ್‌ಗೆ ದಾಳಿ ನಡೆಸಿದ ಸಿಸಿಬಿ ಮತ್ತು ಉರ್ವ ಪೊಲೀಸರು ಶುಕ್ರವಾರ ಜಂಟಿ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.

ಈ ಮಸಾಜ್ ಪಾರ್ಲರ್‌ನಲ್ಲಿ ಯುವತಿಯರನ್ನು ಗ್ರಾಹಕರಿಗೆ ಒದಗಿಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭ ಒಬ್ಬ ಆರೋಪಿಯನ್ನು ಬಂಧಿಸಿ, ಯುವತಿಯನ್ನು ರಕ್ಷಿಸಲಾಗಿದೆ. ಅಲ್ಲದೆ ನಾಪತ್ತೆಯಾದ ದಲ್ಲಾಳಿ ಅಶೋಕನಗರದ ಸುಶೀಲಾ ಎಂಬಾಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯಿಂದ 2,000 ರೂ. ವಶಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಉರ್ವ ಠಾಣೆಯ ಇನ್‌ಸ್ಪೆಕ್ಟರ್ ಕೆ.ಎಂ. ಶರೀಫ್, ಸಿಸಿಬಿ ಘಟಕದ ಎಸ್ಸೈ ಕಬ್ಬಳರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News