×
Ad

ಸಂತ ಅಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವದಲ್ಲಿ ನವೇನ ಪ್ರಾರ್ಥನೆ

Update: 2019-02-09 22:19 IST

ಮಂಗಳೂರು, ಫೆ.9: ನಗರದ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ನಾಲ್ಕನೇ ದಿನದ ಬಲಿ ಪೂಜೆಯನ್ನು ಶನಿವಾರ ಮಿಲಾಗ್ರಿಸ್ ದೇವಾಲಯದಲ್ಲಿ ಆತ್ಮ ಜ್ಯೋತಿ ಸಮಾಲೋಚನಾ ಕೇಂದ್ರದ ಫಾ.ಮ್ಯಾಕ್ಸಿಮ್ ನೆರವೇರಿಸಿದರು.

ಫಾ.ಡೊಲ್ಫಿ ಸೆರಾವೊ ತನ್ನ ಪ್ರವಚನದಲ್ಲಿ ಮಕ್ಕಳಂತೆ ಆಗದಿದ್ದರೆ ನೀವು ದೇವರ ಸಾಮ್ರಾಜ್ಯ ಸೇರಲಾರಿರಿ ಎಂದು ಯೇಸು ಸ್ವಾಮಿ ತನ್ನ ಶಿಷ್ಯರಿಗೆ ಹೇಳಿದ್ದಾರೆ. ಮಕ್ಕಳಂತೆ ಆಗುವುದೆಂದರೆ ಮುಗ್ಧ ಮನಸ್ಸಿನವರಾಗುವುದು. ಮಕ್ಕಳಲ್ಲಿ ಕಪಟತನ ಇರುವುದಿಲ್ಲ. ಅಂತರ್ಜಾಲದ ಪ್ರಭಾವ ಹೆಚ್ಚುತ್ತಿರುವ ಈವತ್ತಿನ ಪ್ರಪಂಚದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಮುಗ್ಧತೆಯಿಂದ ಬೆಳೆಸುವ ಅಗತ್ಯವಿದೆ ಎಂದರು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ತೃಶಾನ್ ಡಿಸೋಜ ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News