ಮಾನಭಂಗಕ್ಕೆ ಯತ್ನಿಸಿದ ಪ್ರಕರಣ : ಆರೋಪಿ ಸೆರೆ

Update: 2019-02-09 17:03 GMT

ಪಡುಬಿದ್ರಿ, ಫೆ. 9: ಇಲ್ಲಿನ ಐಸ್‍ಕ್ರೀಂ ಪಾರ್ಲರ್‍ನಲ್ಲಿ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಯುವಕನೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಫಲಿಮಾರು ನಿವಾಸಿ ಕಬೀರ್ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಜನವರಿ 19ರಂದು ರಾತ್ರಿ 9ಗಂಟೆಗೆ ಪಡುಬಿದ್ರಿ ಪೇಟೆಯಲ್ಲಿರುವ ಐಸ್‍ಕ್ರೀಂ ಪಾರ್ಲರ್‍ಗೆ ಅಪರಿಚಿತ ವ್ಯಕ್ತಿಯೊರ್ವ ಐಸ್ ಕ್ರೀಂ ಖರೀದಿಸಲೆಂದು ಬಂದಿದ್ದು, ಈ ವೇಳೆ ಮಹಿಳೆಯೋರ್ವರ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದ ಎನ್ನಲಾಗದ್ದು, ಕೂಡಲೇ ಬೊಬ್ಬೆ ಹಾಕಿದ್ದರಿಂದ ಅವರನ್ನು ದೂಡಿ ಆರೋಪಿ ಪರಾರಿಯಾಗಿದ್ದ.

ಐಸ್‍ಕ್ರೀಂ ಪಾರ್ಲರ್ ಪಕ್ಕದಲ್ಲಿದ್ದ ಸಿಸಿ ಕ್ಯಾಮೆರಾ ಫೂಟೇಜನ್ನು ಪಡೆದು ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಶನಿವಾರ ಆರೋಪಿ ಕಬೀರ್ ನನ್ನು ಪತ್ತೆಹಚ್ಚಿ ಠಾಣೆಗೆ ಕರೆ ತಂದಿದ್ದರು. ಕೃತ್ಯ ನಡೆಸಿರುವುದನ್ನು ಆರೋಪಿ ಒಪ್ಪಿಕೊಂಡಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News