×
Ad

ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅಧ್ಯಕ್ಷರಾಗಿ ಸಾಜಿದ್ ಎ.ಕೆ ಆಯ್ಕೆ

Update: 2019-02-09 22:48 IST

ಮಂಗಳೂರು, ಫೆ. 9: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಇದರ ವಾರ್ಷಿಕ ಮಹಾಸಭೆಯು ಶನಿವಾರ ಮಂಗಳೂರಿನಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದಿದ್ದು, ಸಾಜಿದ್ ಎ.ಕೆ ಅವರನ್ನು ಸಂಘಟನೆಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮೆಹಫೂಝ್ ಅವರು ಕುರ್ ಆನ್ ಪಾರಾಯಣ ಮಾಡುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸಂಘಟನೆಯ ಪೂರ್ವಾಧ್ಯಕ್ಷ ನಝೀಮ್ ಎಸ್.ಎಸ್ ಮತ್ತು ಚುನಾವಣಾ ಆಯುಕ್ತ ಆರಿಫ್ ಪಡುಬಿದ್ರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಗಣ್ಯರನ್ನು ಮತ್ತು ಅತಿಥಿಗಳನ್ನು ಸಭೆಗೆ ಸ್ವಾಗತಿಸಿದ ನಝೀಮ್ ಅವರು ಎಚ್‌ಐಎಫ್‌ನ ವರದಿ ವಾಚಿಸಿದರು ಮತ್ತು ಅದರ ಚಟುವಟಿಕೆ ಬಗ್ಗೆ ವಿವರಿಸಿದರು. ತನ್ನ ಅಧಿಕಾರಾವಧಿಯಲ್ಲಿ ಬೆಂಬಲ ನೀಡಿ ಪ್ರೋತ್ಸಾಹಿಸಿದ ಎಚ್‌ಐಎಫ್‌ನ ಕಾರ್ಯಕಾರಿ ಸಮಿತಿ ಮತ್ತು ಇತರ ಸದಸ್ಯರಿಗೆ ಈ ವೇಳೆ ನಝೀಮ್ ಧನ್ಯವಾದ ಸೂಚಿಸಿದರು. ಇದೇ ರೀತಿ ಮುಂದಿನ ಅಧ್ಯಕ್ಷರಿಗೂ ಬೆಂಬಲವಾಗಿ ನಿಲ್ಲುವಂತೆ ಅವರು ನೆರೆದಿದ್ದ ಗಣ್ಯರು ಮತ್ತು ಅತಿಥಿಗಳಿಗೆ ಮನವಿ ಮಾಡಿದರು.

ನಂತರ ಮಾತನಾಡಿದ ಆರಿಫ್ ಪಡುಬಿದ್ರಿ ಎಚ್‌ಐಎಫ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮತ್ತು ಸಂಘಟನೆಯ ಜೊತೆ ತನ್ನ ಸಂಬಂಧವನ್ನು ವಿವರಿಸಿದರು. ಸರಿಯಾದ ನಾಯಕನನ್ನು ಆಯ್ಕೆ ಮಾಡುವ ಮತ್ತು ಅದರಿಂದ ಸಂಘಟನೆ ಮೇಲಾಗುವ ಪರಿಣಾಮದ ಬಗ್ಗೆ ಅವರು ವಿವರಿಸಿದರು.

ಈ ವೇಳ ಮಾತನಾಡಿದ ಸಾಜಿದ್ ಎ.ಕೆ ಎಚ್‌ಐಎಫ್‌ ಅನ್ನು ಮುನ್ನಡೆಸಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸೂಚಿಸಿದರು ಮತ್ತು ಸದಸ್ಯರೊಂದಿಗೆ ಸದಾ ಲಭ್ಯವಿರುವುದಾಗಿ ಭರವಸೆ ನೀಡಿದರು.

ಸಂಘಟನೆಯ ಏಳಿಗೆಗಾಗಿ ಸಂಪೂರ್ಣವಾಗಿ ತನ್ನನ್ನು ಅರ್ಪಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು. ಔಸಫ್ ಹುಸೈನ್ ಅವರು ಸಂಘಟನೆಯ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಮುಹಮ್ಮದ್ ರಿಝ್ವಾನ್ ಖಜಾಂಚಿಯಾಗಿ ನೇಮಕಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News