×
Ad

ಬಾಲಕಿ ಅತ್ಯಾಚಾರ ಪ್ರಕರಣ: ಮೂವರ ಬಂಧನ

Update: 2019-02-10 17:02 IST

ಮೂಡುಬಿದಿರೆ, ಫೆ. 10: ಪುಚ್ಚೆಮೊಗರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮತ್ತೆ ಮೂವರನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.

ಪುಚ್ಚೆಮೊಗರಿನ ಮ್ಯಾಕ್ಸಿಂ ತೌರೊ ಹಾಗೂ ವಿನಯ ಅಲಿಯಾಸ್ ವಿನಯ ಮತ್ತು ವೇಣೂರು ಗರ್ಡಾಡಿಯ ಸಂತು ಯಾನೆ ಸಂತೋಷ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಮೂಡುಬಿದಿರೆ ಕೋರ್ಟ್‍ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಕೇರಳ ಮೂಲದ ವ್ಯಕ್ತಿ, ಜಾರ್ಖಂಡ ಮೂಲದ ತನ್ನ ಪತ್ನಿ ಹಾಗೂ 14 ವರ್ಷದ ಮಗಳ ಜತೆ ಪುಚ್ಚೆಮೊಗರಿನಲ್ಲಿ ವಾಸವಾಗಿದ್ದರು. ಪತಿ ಪತ್ನಿ ಕುಡುಕರಾಗಿದ್ದು, ಕಳೆದ ಜುಲೈನಲ್ಲಿ ತಂದೆಯೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ನಂತರ ಮಗಳು ರಾತ್ರಿ ಮನೆ ಹೊರಗಡೆ  ಮಲಗುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ತಂದೆಯಿಂದಲೇ ಮಗಳು ಅತ್ಯಾಚಾರಕ್ಕೊಳಗಾದ ವಿಷಯ ಬೆಳಕಿಗೆ ಬಂದಿತ್ತು. ಬಳಿಕ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಾಲಕಿಯನ್ನು ಮಂಗಳೂರಿನ ರಕ್ಷಣಾ ಕೇಂದ್ರಕ್ಕೆ ಕಳಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದಾಗ ಬಾಲಕಿ ತನ್ನ ಮೇಲೆ ಮ್ಯಾಕ್ಸಿಂ ತೌರೊ, ವಿನಯ ಹಾಗೂ ಸಂತೋಷ್ ಕೂಡ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News