ಫೆ.17ರಿಂದ ಬಾರಕೂರು ಶ್ರೀಏಕನಾಥೇಶ್ವರಿ ದೇವಳದ ವರ್ಧಂತ್ಯುತ್ಸವ
ಉಡುಪಿ, ಫೆ.10: ಬಾರಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವವು ಫೆ.17ರಿಂದ 19ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಅಣ್ಣಯ್ಯ ಬಿ.ಶೇರಿಗಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.17 ರಂದು ಬೆಳಗ್ಗೆ ಆರು ಗಂಟೆಗೆ ಉಡುಪಿ ದೇವಾಡಿಗರ ಸೇವಾ ಸಂಘದಿಂದ ದೇವಸ್ಥಾನದವರೆಗೆ ‘ನಮ್ಮ ನಡಿಗೆ ಅಮ್ಮನೆಡೆಗೆ’ ಪಾದಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ. ಮಧ್ಯಾಹ್ನ 3.30ಕ್ಕೆ ವೈಭವದ ಹಸಿರುವಾಣಿ ಹೊರೆ ಕಾಣಿಕೆ ನಡೆಯ ಲಿದೆ ಎಂದರು.
ಫೆ.18ರಂದು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೆ ನಡೆಯ ಲಿದೆ. 19ರಂದು ಬೆಳಗ್ಗೆ 9 ಗಂಟೆಗೆ ಚಂಡಿಕಾಯಾಗ, 9.30ಕ್ಕೆ ವಧು ವರಾ ನೇಸ್ವಣೆ, ತುಲಾಭಾರ ಸೇವೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, 2.30 ಕ್ಕೆ ದೇವಾಡಿಗ ಮಹೋತ್ಸವ ಜರಗಲಿದೆ. ಮಧ್ಯಾಹ್ನ 3.30ಕ್ಕೆ ನಡೆಯುವ ದೇವಾಡಿಗ ಮಹೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಶ್ರೀವಿಶ್ವಸಂತೋಷ ಭಾರತಿ ಗುರೂಜಿ ಭಾಗವಹಿಸಲಿ ರುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್‌ನ ಉಪಾಧ್ಯಕ್ಷ ಜನಾರ್ದನ ದೇವಾಡಿಗ ಬಿ., ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ, ವ್ಯವಸ್ಥಾಪನಾ ಸಮಿತಿ ಗೌರವ ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಆಡಳಿತಾಧಿಕಾರಿ ಜನಾರ್ದನ ಪಡುಪಣಂಬೂರು ಉಪಸ್ಥಿತರಿದ್ದರು.