ಬ್ರಹ್ಮಾವರ: ಸಾರ್ವಜನಿಕವಾಗಿ ತಲವಾರು ಬೀಸುತ್ತ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಯುವಕ ಸೆರೆ

Update: 2019-02-10 14:12 GMT

ಬ್ರಹ್ಮಾವರ, ಫೆ.10: ಸಾಲಿಕೇರಿ ಶ್ರೀವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಫೆ. 9ರಂದು ರಾತ್ರಿ 10.45ರ ಸುಮಾರಿಗೆ ತಲವಾರು ಝಳಪಿಸುತ್ತ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಕೋಟೆ ಗುಡೆಬೆಟ್ಟು ನಿವಾಸಿ ಸುನಿಲ್ (26) ಬಂಧಿತ ಆರೋಪಿ.

ಈತ ಬ್ರಹ್ಮಾವರ ಪೊಲೀಸ್ ಠಾಣೆಯ ಹಳೆಯ ಹಲ್ಲೆ ಪ್ರಕರಣದ ಆರೋಪಿ. ಸುನೀಲ್, ಸಾರ್ವಜನಿಕ ಸ್ಥಳದಲ್ಲಿ ‘ನಾನು ಯಾರನ್ನೂ ಬಿಡುವುದಿಲ್ಲ ಎಲ್ಲರೂ ನನಗೆ ಹೆದರಬೇಕು’ ಎಂದು ಜೋರಾಗಿ ಕಿರುಚುತ್ತಾ ಸ್ಥಳದಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ದೊರೆತ ಮಾಹಿತಿಯಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಹಿಡಿದು ವಿಚಾರಿಸಿದಾಗ ‘ಸಾರ್ವಜನಿಕರನ್ನು ಭಯಗೊಳಿಸುವ ಉದ್ದೇಶದಿಂದ ತಲವಾರು ಬೀಸುತ್ತಿದ್ದು, ಎಲ್ಲರೂ ನನಗೆ ಹೆದರಬೇಕು’ ಎಂಬುದಾಗಿ ತಿಳಿಸಿದ್ದಾನೆ. ಪರವಾನಿಗೆ ರಹಿತವಾಗಿ ಹರಿತವಾದ ತಲವಾರನ್ನು ಹಿಡಿದು ಬೀಸುತ್ತ ಸಾರ್ವಜನಿಕರನ್ನು ಭಯಭೀತಿಗೊಳಿಸಿ ಅಪರಾಧ ಎಸಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ತಲವಾರು ಸಹಿತ ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News