ರಾಷ್ಟ್ರಪತಿಗೆ ನಾಳೆ ರಫೇಲ್ ಒಪ್ಪಂದದ ವರದಿ ಸಲ್ಲಿಕೆ ಸಾಧ್ಯತೆ

Update: 2019-02-10 14:51 GMT

ಹೊಸದಿಲ್ಲಿ, ಫೆ. 10: ವಿವಾದಾತ್ಮಕ ರಫೇಲ್ ಜೆಟ್ ಒಪ್ಪಂದ ಸಹಿತ ಕಳೆದ ಕೆಲವು ವರ್ಷಗಳ ಸೇನಾ ಸಂಗ್ರಹಣೆಯ ಲೆಕ್ಕಾಚಾರದ ಕುರಿತು ಬಹು ನಿರೀಕ್ಷಿತ ವರದಿಯನ್ನು ಮಹಾಲೇಖಪಾಲರು (ಸಿಎಜಿ) ಸೋಮವಾರ ರಾಷ್ಟ್ರಪತಿ ಅವರಿಗೆ ಸಲ್ಲಿಸುವ ಸಾಧ್ಯತೆ ಇದೆ.

 ಸಿಎಜಿ ಅವರು ಶೋಧನೆ ಹಾಗೂ ವರದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಿದ್ದಾರೆ. ಅವರು ವರದಿ ಸಹಿ ಹಾಕಿದ ಬಳಿಕ ಅದು ಸಂಸತ್ತಿನ ಮುಂದೆ ಬರಲಿದೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ.

 ‘‘ರಾಷ್ಟ್ರಪತಿ ಅವರಿಗೆ ಸಲ್ಲಿಸಲು ವರದಿ ಸಿದ್ಧವಾಗಿದೆ. ಒಂದು ಪ್ರತಿಯನ್ನು ಸರಕಾರಕ್ಕೆ ಕೂಡ ಸಲ್ಲಿಸಲಾಗುವುದು. ವರದಿಯನ್ನು ಸಂಸತ್ತಿನ ಮುಂದಿರಿಸುವ ಸಂಬಂಧಿತ ಅಧಿಕಾರಿಗಳು- ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯ ಸಭೆಯ ಅಧ್ಯಕ್ಷರಿಗೆ ರಾಷ್ಟ್ರಪತಿ ಅವರು ವರದಿ ರವಾನಿಸಲಾಗುವುದು.’’ ಎಂದು ಹೆಸರು ಹೇಳಲಿಚ್ಛಿಸದ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

16ನೆ ಲೋಕಸಭೆಯ ಅಂತಿಮ ಅಧಿವೇಶನದ ಕೊನೆಯ ದಿನವಾದ ಬುಧವಾರ ಈ ವರದಿ ಸಂಸತ್ತಿನ ಮುಂದೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News