‘ಗುಡಿ ಮತ್ತು ಬಂಡೆ’ ಕಥಾಸಂಕಲನ ಬಿಡುಗಡೆ
ಉಡುಪಿ, ಫೆ.10: ಗೀತಾ ಪ್ರಕಾಶನದ ಆಶ್ರಯದಲ್ಲಿ ಲೇಖಕ ಹಾಗೂ ಉರಗ ತಜ್ಞ ಗುರುರಾಜ್ ಸನಿಲ್ ಅವರ ‘ಗುಡಿ ಮತ್ತು ಬಂಡೆ’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮವು ಪುತ್ತೂರು ಗ್ರಾಮದ ಅಕ್ಷಯ ಮನೆಯಲ್ಲಿ ರವಿವಾರ ಜರಗಿತು.
ಕೃತಿಯನ್ನು ಬಿಡುಗಡೆಗೊಳಿಸಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತ ನಾಡಿ, ಇಂದು ಧಾರ್ಮಿಕತೆಯ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡಿ ಎಲ್ಲ ವನ್ನು ಕಾಂಕ್ರೀಟಿಕಣಗೊಳಿಸಲಾಗುತ್ತಿದೆ. ಇದರ ಬಗ್ಗೆ ಗುರುರಾಜ್ ಸನಿಲ್ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ರಂಗ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಗುರುರಾಜ್ ಮಾರ್ಪಳ್ಳಿ ಕೃತಿ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ಕಾಣ ಸಿಗುವ ಮಲಬಾರ್ ಗುಳಿ ಮಂಡಲ ಎಂಬ ಹಾವಿನ ಕುರಿತ ಪ್ರಶಾಂತ್ ಸಾಗರ ಸಿರ್ಮಿಸಿರುವ ಸಾಕ್ಷಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಗಿನ್ನಿಸ್ ದಾಖಲೆ ಸಾಧಕಿ ತನುಶ್ರೀ ಪಿತೆ್ರಿಡಿ ಅವರನ್ನು ಸನ್ಮಾನಿಸಲಾಯಿತು.
ಗೀತಾ ಗುರುರಾಜ್ ಉಪಸ್ಥಿತರಿದ್ದರು. ಲೇಖಕ ಗುರುರಾಜ್ ಸನಿಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ನಿರ್ದೇಶಕ ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು.