ಧೂಮಪಾನ, ಮದ್ಯಪಾನದಿಂದ ಮಕ್ಕಳಲ್ಲಿ ಜನ್ಮಜಾತ ಮುಖದ ವಿರೂಪ

Update: 2019-02-10 16:34 GMT

ಹೊಸದಿಲ್ಲಿ,ಫೆ.10: ಧೂಮಪಾನ, ಮದ್ಯಪಾನ, ಪರೋಕ್ಷ ಧೂಮಪಾನ, ಮಿತಿಮೀರಿ ಔಷಧಿ ಸೇವನೆ ಮತ್ತು ಗರ್ಭಾವಸ್ಥೆಯ ಮೊದಲ ಕೆಲವು ವಾರಗಳಲ್ಲಿ ವಿಕಿರಣಕ್ಕೆ ತೆರೆದುಕೊಳ್ಳುವುದರಿಂದ ಹುಟ್ಟುವ ಮಕ್ಕಳಲ್ಲಿ ಸೀಳು ತುಟಿಯಂಥ ಮುಖದ ಜನ್ಮಜಾತ ವಿರೂಪಕ್ಕೆ ಕಾರಣವಾಗಬಹುದು ಎಂದು ಎಐಐಎಂಎಸ್ ನಡೆದ ಅಧ್ಯಯನದಲ್ಲಿ ತಿಳಿದುಬಂದಿದೆ.

ಸೀಳು ತುಟಿಯಿಂದಾಗಿ ಹುಟ್ಟುವ ಮಕ್ಕಳಲ್ಲಿ ತುಟಿಯ ಎರಡು ಬದಿಗಳು ಸರಿಯಾಗಿ ಬೆಳೆಯುವುದಿಲ್ಲ. ಇದರಿಂದಾಗಿ ಅಂಥ ಮಕ್ಕಳು ಮಾತನಾಡಲು ಮತ್ತು ಆಹಾರವನ್ನು ಜಗಿಯಲು ಕಷ್ಟಪಡಬೇಕಾಗುತ್ತದೆ ಮತ್ತು ಪರಿಣಾಮವಾಗಿ ಹಲ್ಲುಗಳ ಅಸಮಾನ ಜೋಡಣೆ, ದವಡೆಗಳ ಅಸಮತೋಲನ ಮತ್ತು ಮುಖದ ವಿರೂಪಕ್ಕೆ ಕಾರಣವಾಗುತ್ತದೆ. ಜಗತ್ತಿನಲ್ಲಿ ಪ್ರತೀ 700 ಮಂದಿ ಮುಖದ ಜನ್ಮಜಾತ ವಿರೂಪ ಹೊಂದಿರುವ ಜನರ ಪೈಕಿ ಒಬ್ಬರು ಸೀಳು ತುಟಿಯನ್ನು ಹೊಂದಿರುತ್ತಾರೆ. ಏಶ್ಯಾದ ಜನಸಂಖ್ಯೆಯಲ್ಲಿ ಇದರ ಪ್ರಮಾಣವು ಪ್ರತೀ ಸಾವಿರ ಜನನಕ್ಕೆ 1.7 ಆಗಿದೆ. ಭಾರತದಲ್ಲಿ ರಾಷ್ಟ್ರೀಯ ಸಾಂಕ್ರಾಮಿಕ ರೋಗ ದತ್ತಾಂಶ ಲಭ್ಯವಿಲ್ಲದಿದ್ದರೂ ದೇಶದ ವಿವಿಧ ಭಾಗಗಳಲ್ಲಿ ನಡೆದ ಅಧ್ಯಯನಗಳ ವರದಿಯಲ್ಲಿ ಸೀಳು ತುಟಿಯ ಅಂಕಿಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸೀಳು ತುಟಿ ಹೊಂದಿರುವ 35,000 ಮಕ್ಕಳ ಜನನವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News