×
Ad

ಬ್ಯಾರಿ ಮೇಳಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು: ಎಸ್.ಎಂ.ರಶೀದ್ ಹಾಜಿ

Update: 2019-02-10 22:17 IST

ಮಂಗಳೂರು, ಫೆ.10: ಬ್ಯಾರಿ ಮೇಳಕ್ಕೆ ರಾಜ್ಯದ ವಿವಿಧೆಡೆಯಿಂದ ಬ್ಯಾರಿ ಸಮುದಾಯದವರು ಆಗಮಿಸಿದ್ದು ಸಂತಸದ ವಿಷಯ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬ್ಯಾರಿ ಮೇಳ ಸಮಾವೇಶವು ನಿರೀಕ್ಷೆಗೂ ಮೀರಿದ ಯಶಸ್ಸುಗಳಿಸಿದೆ ಎಂದು ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಹೇಳಿದರು.

ಬ್ಯಾರೀಸ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ)ನಿಂದ ನಗರದ ಪುರಭವನದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಬ್ಯಾರಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ಯಾರಿ ಮೇಳವನ್ನು ಯಶಸ್ವಿಗೊಳಿಸಲು ಕಾರಣೀಕರ್ತರಾದ ಮೇಳದ ಸಂಚಾಲಕರು, ಪದಾಧಿಕಾರಿಗಳು, ಪ್ರೇಕ್ಷಕರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.

ಬ್ಯಾರಿ ಮೇಳದ ಸಂಚಾಲಕ ಮನ್ಸೂರ್ ಅಹ್ಮದ್ ಮಾತನಾಡಿ, ಬ್ಯಾರಿ ಮೇಳಕ್ಕೆ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾರಿ ಸಮುದಾಯವನ್ನು ಒಗ್ಗೂಡಿಸುವಲ್ಲಿ ಬ್ಯಾರಿ ಮೇಳವು ಪ್ರಯತ್ನಿಸಿದೆ. ಮುಂದಿನ ದಿನಗಳಲ್ಲೂ ಇಂತಹ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಬಿಸಿಸಿಐ ಹಾಸನ ಚಾಪ್ಟರ್ ಅಧ್ಯಕ್ಷ ಝಾಕಿರ್ ಯಾದ್‌ಗಾರ್, ಚಿಕ್ಕಮಗಳೂರು ಚಾಪ್ಟರ್ ಸದಸ್ಯ ಸಿ.ಕೆ. ಇಬ್ರಾಹೀಂ, ಆಸಿಫ್ ಸೂಫಿಖಾನ್, ಬಿ.ಎಂ. ಮುಮ್ತಾಝ್ ಅಲಿ, ಎಂ.ಶೌಕತ್ ಶೌರಿ, ಮುಹಮ್ಮದ್ ಹಾರಿಸ್, ಅಸ್ಗರ್ ಹಾಜಿ, ರಿಯಾಝ್ ಎ.ಕೆ. ಬಾವಾ, ಇಮ್ತಿಯಾಝ್, ಝಕರಿಯ ಜೋಕಟ್ಟೆ, ನಿಸಾರ್ ಮುಹಮ್ಮದ್, ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ರಝಾಕ್ ಜಿ., ಝಿಯಾವುದ್ದೀನ್, ನಿಸ್ಸಾರ್ ಮುಹಮ್ಮದ್ ಫಕೀರ್, ಮುಹಮ್ಮದ್ ಅಶ್ರಫ್, ಎ.ಕೆ.ನಿಯಾಝ್, ಮುಹಮ್ಮದ್ ಕಾಸಿಮ್ ಅಹ್ಮದ್, ಮುಹಮ್ಮದ ಶರೀಫ್ ಎಂ., ಎ.ಎಚ್.ಮಹಮೂದ್, ಬಿ.ಎಂ.ಅಸ್ಗರ್ ಅಲಿ, ಎಸ್.ಎಂ.ಬಶೀರ್ ಮತ್ತಿತರರು ಉಪಸ್ಥಿತರಿದ್ದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News