ಪಾಂಗಾಳ: ಕಾರು ಢಿಕ್ಕಿ ಹೊಡೆದು ಮಹಿಳೆ ಸಾವು

Update: 2019-02-10 16:49 GMT

ಕಾಪು, ಫೆ. 10: ಪಾದಚಾರಿಗೆ ಕಾರು ಢಿಕ್ಕಿಯಾಗಿ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಕಾಪು ಠಾಣಾ ವ್ಯಾಪ್ತಿಯ ಪಾಂಗಾಳ ಜನಾರ್ದನ ದೇವಳದ ಮುಂಭಾಗದಲ್ಲಿ ಸಂಭವಿಸಿದೆ.

ಮೃತ ಮಹಿಳೆ ಉಡುಪಿ ಟೆಲಿಫೋನ್ ಎಕ್ಸ್ಚೇಂಜ್ ಬಳಿಯ ನಿವಾಸಿ ಮೈಮುನಾ (65) ಎಂದು ಗುರುತಿಸಲಾಗಿದೆ.

ಇವರು ಪ್ರತಿ ಮಂಗಳವಾರ ಕಾಪು ಕಲ್ಯ ಮಾರಿಗುಡಿ ಸಮೀಪದಲ್ಲಿ ಹಣ್ಣು ಕಾಯಿ ವ್ಯಾಪಾರ ನಡೆಸುತ್ತಿದ್ದರು. ಪಾಂಗಾಳದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವ್ಯಾಪಾರಕ್ಕಾಗಿ ಸ್ಥಳ ಗುರುತಿಸಿ ಮನೆಗೆ ತೆರಳಲು ರಸ್ತೆ ಬದಿ ನಡೆದುಕೊಂಡು ಹೋಗುತಿದ್ದಾಗ ಉಡುಪಿಯತ್ತ ಚಲಿಸುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News