ಅಸಹಾಯಕರಿಗೆ ನೆರವಾಗುವುದೇ ನಿಜವಾದ ಧರ್ಮ: ಡಾ. ವೀರೇಂದ್ರ ಹೆಗ್ಗಡೆ

Update: 2019-02-10 17:35 GMT

ಬೆಳ್ತಂಗಡಿ, ಫೆ. 10: ಅಸಹಾಯಕರಿಗೆ ನೆರವಾಗುವುದೇ ನಿಜವಾದ ಧರ್ಮವಾಗಿದ್ದು ಅಶಕ್ತರಿಗೆ ನೆರವಾಗುವ ಗುರಿಯೊಂದಿಗೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಸಾಮಾನ್ಯರಿಗೆ ನೆರವಾಗುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಧರ್ಮಸ್ಥಳದ ಧಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರು ಹೇಳಿದರು. 

ಅವರು ಇಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಮಂಗಲ ಕಾರ್ಯಕ್ರಮದ ಭಾಗವಾಗಿ ಅಶಕ್ತರಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧರ್ಮಸ್ಥಳದ ಕಾರ್ಯಕ್ರಮಗಳು ನಸದಾ ಜನರ ಸಹಯೋಗದೊಂದಿಗೆ ನಡೆಯುತ್ತಿದ್ದು ಗ್ರಾಮಾಭಿವೃದ್ದಿಯೋಜನೆಯಲ್ಲಿರುವವರು ಯೋಜನೆಯೊಂದಿಗೆ ತಾವೂ ಕೈಜೋಡಿಸಿ ಅಭಿವೃದ್ದಿಹೊಂದುತ್ತಾರೆ ಎಂದರು.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯೆಪ್ರಸನ್ನತೀರ್ಥ ಸ್ವಾಮೀಜಿಯವರು ಮತನಾಡಿ ಭಾರತದ ಶ್ರೇಷ್ಠತೆಯಿರುವುದು ತ್ಯಾಗದ ಮೂಲಕವಾಗಿ ಅಮರತ್ವವನ್ನು ಪಡೆಯುವುದಾಗಿದೆ. ಅಹಿಂಸೆಯ ಮೂಲಕವಾಗಿ ಜೈನಧರ್ಮ  ಎಲ್ಲ ಧರ್ಮದಳ ಮೇಲೆಯೂ ಪ್ರಭಾವ ಬೀರಿರುವುದನ್ನು ಕಾಣಬಹುದಾಗಿದೆ. ಹಿಂಸೆಯಿಂದ ದೂರವಾಗಿ ನಡೆಯುವುದೇ ಧರ್ಮವಾಗಿದೆ, ಧರ್ಮ ಮತ್ತು ಅಹಿಂಸೆ ಒಟ್ಟಾಗಿ ಸಾಗಬೇಕಾಗಿದೆ ಎಂದರು. 

ಮಾಜಿ ಸಚಿವ ಬಿ. ರಮಾನಾಧ ರೈ ಮಾತನಾಡಿ ಜಗತ್ತಿನಲ್ಲಿ ಹಿಂಸೆ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಭಗವಾನ್ ಬಾಹುಬಲಿಯವರ ಆದರ್ಶ ಗಳು ಹೆಚ್ಚು ಪ್ರಸ್ತುತವಾಗಿದೆ. ದಯವೇ ಧರ್ಮದ ಮೂಲವೆಂಬ ಸಂದೇಶವನ್ನು ಧರ್ಮಸ್ಥಳ ಸಾರುತ್ತಿದೆ ಎಂದರು. 

ಮುಖ್ಯ ಅತಿಧಿಗಲಾಗಿ ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಅಹಿಂಸೆ ಮಾತ್ರ ಜಗತ್ತನ್ನು ಉಳಿಸಬಲ್ಲುದಾಗಿದೆ. ಮಹಾ ಮಸ್ತಕಾಭಿಷೇಕದಂತಹ ಕಾರ್ಯಕ್ರಮಗಳು ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುವಂತಾಗಲಿ ಎಂದರು. 

ವೇದಿಕೆಯಲ್ಲಿ ಮಾಜಿ ಸಚಿವ ಅಮರನಾಧ ಶೆಟ್ಟಿ, ಸಂಪತ್ ಸಮ್ರಾಜ್ಯ, ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ಧನ್, ಸುರೇಂದ್ರ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು. ಡಾ. ಎಲ್ ಹೆಚ್ ಮಂಜುನಾಧ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. 

ಈ ಸಂದರ್ಭದಲ್ಲಿ 540 ಮಂದಿಗೆ ವೀಲ್ ಚೆಯರ್, 400 ಮಂದಿಗೆ ವಾಕರ್‍ಗಳನ್ನು, 110 ಮಂದಿಗೆ ವಾಕಿಂಗ್ ಸ್ಟಿಕ್‍ಗಳನ್ನು ಹಾಗೂ ವಾಟರ್ ಬೆಡ್‍ಗಳು ಸೇರಿದಂತೆ 1.25 ಕೋಟಿಯ ಸಲಕರಣೆಗಳನ್ನು ವಿಕಲಚೇತನರಿಗೆ ವಿತರಿಸಲಾಯಿತು.

ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರುಗಳು ಸರಕು ಹಾಗೂ ಜನಸಾಗಾಟಕ್ಕಾಗಿ ವಾಹನಗಳನ್ನು ಖರೀದುಸುವುದಿದ್ದರೆ ಅವರಿಗೆ ರೂ ಹತ್ತು ಸಾವಿರ ಸಹಾಯಧನ ನೀಡುವುದಾಗಿಯೂ ಪ್ರಕಟಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News