×
Ad

ಪೂಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 35ನೆ ವಾರ್ಷಿಕೋತ್ಸವ

Update: 2019-02-10 23:19 IST

ಬಂಟ್ವಾಳ, ಫೆ. 10: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 35ನೆ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 11ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 13 ಜೋಡಿ ವಧು-ವರರು ಕೃಷ್ಣಭಟ್ ಪೌರೋಹಿತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬದಿಯಡ್ಕ ಉದ್ಯಮಿ ವಸಂತ ಪೈ ಅವರು ಉದ್ಘಾಟಿಸಿದರು. 

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಅತಿಥಿಯಾಗಿ ಮಾತನಾಡಿ, ಸಾಮೂಹಿಕ ವಿವಾಹದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಲ್ಲಿ ವಿಶ್ವಾಸ ತುಂಬಿ ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎನ್ನುವ ಉತ್ತಮ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಸರಳ ಮದುವೆ, ಆದರ್ಶ ವಿವಾಹ ಹಾಗೂ ಅಂತರ್ಜಾತಿ ವಿವಾಹಕ್ಕೆ ಪೆÇ್ರೀತ್ಸಾಹ ನೀಡಬೇಕು. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇಂತಹ ಅದ್ಭುತ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದ ಅವರು, ರಾಜಕಾರಣ ನಡೆಸುವುದು ಮಾತ್ರ ರಾಜಕಾರಣಿಗಳ ಕೆಲಸವಲ್ಲ, ಸಾಮಾಜಿಕ ಬದ್ಧತೆ, ಇತರರ ಬದುಕಿಗೆ ಚೈತನ್ಯ ನೀಡುವ ಕಾರ್ಯವಾಗಬೇಕು. ಅದಕ್ಕೆ ತುಂಗಪ್ಪ ಬಂಗೇರ ಮಾದರಿ ಎಂದವರು ಶ್ಲಾಘಿಸಿದರು. 

ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಉಚಿತ ಸಾಮೂಹಿಕ ವಿವಾಹ ಪೂರಕವಾಗಿದೆ. ಆಡಂಬರದ ವಿವಾಹಕ್ಕಿಂತ ಸರಳ ವಿವಾಹಕ್ಕೆ ಒತ್ತು ನೀಡುವ ಮೂಲಕ ತುಂಗಪ್ಪ ಬಂಗೇರರ ನೇತೃತ್ವದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿಯಾಗಿದೆ ಎಂದು ಹೇಳಿದರು.

ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿ ಮಾತನಾಡಿದರು. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ತಹಶೀಲ್ದಾರ್ ಪುರಂದರ ಹೆಗ್ಡೆ, ಬೆಂಗಳೂರು ವಕೀಲ ಸ್ವರ್ಣಲತಾ ಹೆಗ್ಡೆ, ಉದ್ಯಮಿಗಳಾದ ನಿತ್ಯಾನಂದ ಪೂಜಾರಿ ಕೆಂತಲೆ, ವಸಂತ ಹೆಗ್ಡೆ ಬೆಂಗಳೂರು, ಮೋಹನ್ ಚೌಧುರಿ, ಓಂ ಪ್ರಸಾದ್, ಹರೀಂದ್ರ ಪೈ, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗುತ್ತಿಗೆದಾರ ರವಿ ಕಕ್ಯಪದವು, ಬೆಸೆಂಟ್ ಕಾಲೇಜು ಗ್ರಂಥಪಾಲಕ ಲೋಕರಾಜ ವಿಟ್ಲ, ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರ್, ಟಿ.ವಿ. ನಿರೂಪಕ ದಯಾನಂದ ಕತ್ತಲ್‍ಸಾರ್, ತು.ರ.ವೇ. ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಎಲ್ಲೈಸಿ ಅಧಿಕಾರಿ ವೆಂಕಪ್ಪ, ಇಂಜಿನಿಯರ್ ಸಂದೀಪ್ ಆಚಾರ್ಯ, ಸ್ವರ್ಣೋದ್ಯಮಿ ಕೆ. ಲೋಕೇಶ್ ಆಚಾರ್ಯ, ವಾಮದಪದವು ವ್ಯ.ಸೇ.ಸ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಸ್ವಸ್ತಿಕ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಪದಾಧಿಕಾರಿಗಳಾದ ಮಾಧವ ಬಂಗೇರ, ಜಯರಾಜ ಅತ್ತಾಜೆ, ರಾಜೇಶ್ ಪಿ. ಬಂಗೇರ, ಅಬ್ದುಲ್ ಹಮೀದ್, ರತ್ನಾಕರ ಪಿ.ಎಂ. ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: 

ಈ ಸಂದರ್ಭದಲ್ಲಿ ಶ್ರೀನಿವಾಸ ಪಿ.ಸಾಫಲ್ಯ, ಮುಂಬಯಿ(ಸಮಾಜಸೇವೆ), ಸುಂದರ ಹೆಗ್ಡೆ(ಚಲನಚಿತ್ರ), ಅಶೋಕ್ ಚೂಂತಾರು (ಕೃಷಿ), ಲ|ಸದಾಶಿವ ಆಚಾರ್ಯ(ಉದ್ಯಮ), ಕಲಾಕುಂಭ ಸಾಂಸ್ಕøತಿಕ ವೇದಿಕೆ, ಕುಳಾಯಿ(ಸಂಘಟನೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ರವಿ ರೈ ಕಳಸ(ಚಲನಚಿತ್ರ), ಹೊನ್ನಪ್ಪ ಪೂಜಾರಿ (ಸಂಘಟನೆ), ಡಾ. ರಾಮಕೃಷ್ಣ ಎಸ್.(ಸಮಾಜ ಸೇವೆ), ಎಸ್.ಪಿ.ಸರಪಾಡಿ(ಕಲೆ), ಅನ್ವಿಷಾ ವಾಮಂಜೂರು(ಸಾಂಸ್ಕøತಿಕ), ಕಾವ್ಯಶ್ರೀ ಜೋಡುಕಲ್ಲು(ಯೋಗ), ಪುರಂದರ ಹೆಗ್ಡೆ(ಸರಕಾರಿ ಸೇವೆ), ಸಚಿನ್ ಅತ್ತಾಜೆ(ಕಲೆ) ರಾಮ ಪಿ.ಸಾಲ್ಯಾನ್(ಶಿಕ್ಷಣ)  ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ನೀಡಲಾಯಿತು.

ಆಕರ್ಷಕ ದಿಬ್ಬಣ ಮೆರವಣಿಗೆ:

ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಪುಂಜಾಲಕಟ್ಟೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ದಿಬ್ಬಣ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಬಳಿಕ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂ ರಾಜ್ಯದ  ಪ್ರಸಿದ್ಧ ಕಲಾತಂಡಗಳೊಂದಿಗೆ, ಶಿಲ್ಪಾ ಗೊಂಬೆ ಬಳಗ, ವಿವಿಧ ವಾಹನಗಳೊಂದಿಗೆ ಬ್ಯಾಂಡ್‍ವಾದನ, ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವಪೂರ್ಣವಾಗಿ ಬಂಗ್ಲೆ ಮೈದಾನಕ್ಕೆ ಸಾಗಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News