ಉಳಾಯಿಬೆಟ್ಟು: ಫೆ.17 ರಿಂದ ಉರೂಸ್, ಸ್ವಲಾತ್ ವಾರ್ಷಿಕ ಕಾರ್ಯಕ್ರಮ

Update: 2019-02-11 11:51 GMT

ಮಂಗಳೂರು, ಫೆ.11: ಹಝ್ರತ್ ಅಸ್ಸಯ್ಯದ್ ಶುಹೂದು ವಲಿಯುಲ್ಲಾಯಿ (ಖಸ) ರವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಮುಬಾರಕ್ ಹಾಗೂ ಸ್ವಲಾತ್ ವಾರ್ಷಿಕ ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದಲ್ಲಿ ಸಾಲೆ ಜುಮ್ಮಾ ಮಸೀದಿ ವಠಾರದಲ್ಲಿ ಫೆ.17 ರಿಂದ 24ರ ವರೆಗೆ ನಡೆಯಲಿದೆ.

ಫೆ.17ರಂದು ಉರೂಸ್ ಕಾರ್ಯಕ್ರಮ ಉದ್ಘಾಟನೆ ಹಾಗೂ ಸ್ವಲಾತ್ ವಾರ್ಷಿಕ ನಡೆಯಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೆ.ಪಿ ಇರ್ಶಾದ್ ಹುಸೈನ್ ದಾರಿಮಿ ಅಲ್-ಜಝರಿ ದುಆ ಆಶಿರ್ವಚನ ನೀಡಲಿದ್ದಾರೆ. ಝುಬೈರ್ ಫೈಝಿ ಅಂಕೋಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸ್ವಲಾತ್ ಮಜ್ಲಿಸ್ ಗೆ ಅಸ್ಸಯ್ಯದ್ ಸಫ್ವಾನ್ ತಂಙಳ್ ಎಲಿಮಲೆ ನೇತೃತ್ವ ನೀಡಲಿದ್ದಾರೆ. ಉಳಾಯಿಬೆಟ್ಟು ಸಾಲೆ ಜುಮಾ ಮಸ್ಜಿದ್ ಅಧ್ಯಕ್ಷ ಎಂ.ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆ.18 ರಂದು ಉನೈಸ್ ಫೈಝಿ, ಫೆ.19 ರಂದು ಹಮೀದ್ ಫೈಝಿ, ಫೆ.20 ರಂದು ಇರ್ಷಾದ್ ಫೈಝಿ, ಫೆ.21 ರಂದು ಉಮರುಲ್ ಫಾರೂಕ್ ಸಖಾಫಿ, ಫೆ.22 ರಂದು ಝುಬೈರ್ ಫೈಝಿ ಅಂಕೋಲಾ, ಪೆ.23ರಂದು ಝುಬೈರ್ ದಾರಿಮಿ ಪ್ರವಚನ ನೀಡಲಿದ್ದಾರೆ.

ಫೆ. 24 ರಂದು ಹಗಲು ಉರೂಸ್ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಾದಾತುಗಳು, ವಿದ್ವಾಂಸರು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News