ಚೊಕ್ಕಬೆಟ್ಟು: ಫೆ.12ರಿಂದ ಧಾರ್ಮಿಕ ಮತ ಪ್ರವಚನ

Update: 2019-02-11 14:34 GMT

ಮಂಗಳೂರು, ಫೆ.11: ಎಸ್ಕೆಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಚೊಕ್ಕಬೆಟ್ಟು ಶಾಖೆಗಳ ಜಂಟಿ ಆಶ್ರಯದಲ್ಲಿ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಮತ ಪ್ರವಚನ ಹಾಗೂ ಮರ್ಹೂಮ್ ಶೈಖುನಾ ಮಿತ್ತಬೈಲು ಉಸ್ತಾದ್ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯು ಫೆ.12ರಿಂದ 14ರವರೆಗೆ ಮಂಗಳೂರು ಹೊರವಲಯದ ಚೊಕ್ಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಬಳಿ ನಡೆಯಲಿದೆ.

ಫೆ.12ರಂದು ರಾತ್ರಿ 8 ಗಂಟೆಗೆ ಅಶ್ರಫ್ ರಹ್ಮಾನಿ ಚೌಕಿ ಕಣ್ಣನ್ನೂರು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದು, ಫೆ.13ರಂದು ಕರೀಂ ಫೈಝಿ ಕುಂತೂರು (ಜೂನಿಯರ್ ನೌಶಾದ್ ಬಾಖವಿ) ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಸಮಾರೋಪ ಸಮಾರಂಭ

ಫೆ.14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದು, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹಾಜಿ ಅಬೂಬಕರ್ ಮುಸ್ಲಿಯಾರ್, ಬೊಳ್ಳೂರು ಉಸ್ತಾದ್ ಅಝ್‌ಹರ್ ಫೈಝಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್-ಎಸ್‌ವೈಎಸ್‌ಗಳ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಜ್ಲಿಸುನ್ನೂರ್ ಸಂಗಮ

ಫೆ.14ರಂದು ಮಗರಿಬ್ ನಮಾಝ್ ನಂತರ ಮಜ್ಲಿಸುನ್ನೂರ್ ಸಂಗಮ ಸಮಾವೇಶ ನಡೆಯಲಿದ್ದು, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ ಸಮಾವೇಶದ ನೇತೃತ್ವ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News