ಪರೀಕ್ಷೆಯಲ್ಲಿ ಫೇಲಾಗುವುದು ಕಷ್ಟ, ಪಾಸಾಗುವುದು ಸುಲಭ: ಅಬ್ದುಲ್ ರಝಾಕ್ ಅನಂತಾಡಿ

Update: 2019-02-12 06:39 GMT

ಬಂಟ್ವಾಳ, ಫೆ. 11: ಕಲ್ಲಡ್ಕ ಮೊಹಿಯದ್ದೀನ್ ಜುಮಾ ಮಸೀದಿ ಇದರ ಆಡಳಿತ ಸಮಿತಿ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರ ಕಲ್ಲಡ್ಕದಲ್ಲಿ ರವಿವಾರ ನಡೆಯಿತು.

ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ, ವಿದ್ಯಾರ್ಥಿಗಳು ಒಂದು ವರ್ಷಗಳಲ್ಲಿ ಕಲಿತ ವಿಧ್ಯೆಯನ್ನು ಪರೀಕ್ಷಾ ಕೊಠಡಿಯಲ್ಲಿ ಎರಡುವರೆ ಗಂಟೆಗಳ ಕಾಲ ಲೀಲಾಜಾಲವಾಗಿ ಬರೆದು ಪಾಸಾಗುವುದು ಸುಲಭ, ಪೆನ್ನು ಕಚ್ಚಿ, ಬಾಗಿಲು ಕಿಟಕಿ ನೋಡಿ ಸಮಯ ವ್ಯರ್ಥ ಮಾಡುವುದು ಕಷ್ಟ ಎಂದು ಹೇಳಿದರು.

ಕಲ್ಲಡ್ಕ ಮೊಹಿಯದ್ದೀನ್ ಜುಮಾ ಮಸೀದಿ ಮುದರ್ರಿಸ್ ಇಸ್ಮಾಯಿಲ್ ಫೈಝಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಶಿಕ್ಷಕ ಅಬ್ದುಲ್ಲ ಮುಸ್ಲಿಯಾರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಬ್ದುಲ್ ಹಮೀದ್ ಸ್ವಾಗತಿಸಿ, ಆಡಳಿತ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News