ಅಡಗಿಕೊಂಡು ಬದುಕಲು ಇಷ್ಟಪಡುವುದಿಲ್ಲ: ಸಲ್ಮಾನ್ ರಶ್ದಿ

Update: 2019-02-11 15:22 GMT

ಪ್ಯಾರಿಸ್, ಫೆ. 11: ‘‘ನಾನು ಅಡಗಿಕೊಂಡು ಬದುಕಲು ಇಷ್ಟಪಡುವುದಿಲ್ಲ’’ ಎಂಬುದಾಗಿ 30 ವರ್ಷಗಳ ಅವಧಿಯಲ್ಲಿ ತೆರೆಮರೆಯ ಜೀವನ ನಡೆಸಿದ ಕಾದಂಬರಿಕಾರ ಸಲ್ಮಾನ್ ರಶ್ದಿ ಹೇಳಿದ್ದಾರೆ.

ಪ್ಯಾರಿಸ್‌ ಗೆ ನೀಡಿದ ಭೇಟಿಯ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಅವರ ‘ದ ಸೆಟಾನಿಕ್ ವರ್ಸಸ್’ ಕಾದಂಬರಿಯನ್ನು ‘ದೇವನಿಂದನೆ’ ಎಂಬುದಾಗಿ ಘೋಷಿಸಿದ ಇರಾನ್‌ನ ಧಾರ್ಮಿಕ ನಾಯಕ ಆಯತುಲ್ಲಾ ರುಹೊಲ್ಲಾ ಖೊಮೈನಿ, 1989 ಫೆಬ್ರವರಿ 14ರಂದು ಅವರ ಹತ್ಯೆಗೆ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಅಂದಿನಿಂದ ಪ್ರತಿ ವರ್ಷವೂ ಇರಾನ್ ಈ ಫತ್ವಾವನ್ನು ನವೀಕರಿಸಿಕೊಂಡು ಬರುತ್ತಿದೆ.

‘‘ವಿಷಯಗಳು ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಇದು ಅತ್ಯಂತ ಹಳೆಯ ವಿಷಯ. ಈಗ ಹೆದರಬೇಕಾದ ಇನ್ನಿತರ ವಿಷಯಗಳು ಬೇಕಾದಷ್ಟಿವೆ’’ ಎಂದು ರಶ್ದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News