ಕಾವಿ ಚಿತ್ತಾರ ಕಲಾ ಪ್ರಕಾರದ ಉಳಿಸುವುದು ಇಂದಿನ ಅಗತ್ಯ: ರಮೇಶ್ ರಾವ್

Update: 2019-02-11 15:59 GMT

ಕುಂದಾಪುರ, ಫೆ.11: ಚಿತ್ರಕಲಾ ಪರಂಪರೆಯಲ್ಲಿ ಕಾವಿ ಚಿತ್ತಾರ ಅತ್ಯಂತ ಪುರಾತನವಾಗಿದೆ. ಈ ಕಲೆ ಬುಡಕಟ್ಟು ಸಮುದಾಯದಿಂದ ಆರಂಭವಾಗಿ ರುವುದಕ್ಕೆ ಸಾಕ್ಷಿಗಳಿವೆ. ಕರಾವಳಿ ಕರ್ನಾಟಕ ಮತ್ತು ಗೋವಾ ಭಾಗಗಳಲ್ಲಿ ಕಾವಿ ಬಣ್ಣವನ್ನು ಗೀರು ಚಿತ್ರವಾನ್ನಾಗಿ ಬಳಸಿ ಸಂರಕ್ಷಿಸಲಾಗಿದ್ದು, ಮರೆಯಾಗುತ್ತಿರುವ ಈ ಕಲಾ ಪ್ರಕಾರವನ್ನು ಉಳಿಸಿ ಬೆಳೆಸುವಲ್ಲಿ ಹಿರಿಯ ಕಲಾವಿದರ ಪಾತ್ರ ಪ್ರಮುಖ ಎಂದು ಹಿರಿಯ ಕಲಾವಿದ ರಮೇಶ್ ರಾವ್ ಹೇಳಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಮೂಡಲಕಟ್ಟೆ ದೊಡ್ಡಮನೆ ಯಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯಮಟ್ಟದ ಪಾರಂಪರಿಕ ಕಾವಿ ಚಿತ್ತಾರ ಕಾರ್ಯಗಾರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿ ದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮಾತನಾಡಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ವಿನೂತನ ಕಾರ್ಯಕ್ರಮಗಳನ್ನು ಪ್ರಸಕ್ತ ದಿನಮಾನದಲ್ಲಿ ಹಾಕಿಕೊಳ್ಳುತ್ತಿದ್ದು, ಅದರಲ್ಲಿ ಕಾವಿ ಚಿತ್ತಾರ ಕಾರ್ಯಗಾರವು ಪ್ರಮುಖವಾಗಿದೆ. ಕಾವಿ ಕಲೆಯ ಬೆಳವಣಿಗೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕ ಡಾ.ಯು. ಸಿ.ನಿರಂಜನ್, ಉಡುಪಿ ಪ್ರಾಚ್ಯ ಸಂಚಯ ಸಂಶೋದನಾ ಕೇಂದ್ರದ ನಿರ್ದೇಶಕ ಹಾಗೂ ಜಾನಪದ ತಜ್ಞ ಪ್ರೊ.ಎಸ್.ಎ.ಕೃಷ್ಣಯ್ಯ ಮುಖ್ಯ ಅತಿಥಿಗಳಾಗಿದ್ದರು. ಮೂಡಲಕಟ್ಟೆ ದೊಡ್ಡಮನೆಯ ಸುಧಾಕರ ಹೆಗಡೆ, ಅಕಾಡೆಮಿಯ ಸದಸ್ಯ ನಿಹಾಲ್ ವಿಕ್ರಮ್ ರಾಜು ಮೊದಲಾದವರು ಉಪಸ್ಥಿತರಿದ್ದರು.

ಅಕಾಡೆಮಿಯ ಸದಸ್ಯ ಸಂಚಾಲಕ ರಾಘವೇಂದ್ರ ಕೆ ಅಮೀನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಕೇದಿಗೆ ವಂದಿಸಿದರು. ಅಕಾ ಡೆಮಿ ಸದಸ್ಯ ದೇವೇಂದ್ರ ಹುಡಾ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗದ ಒಟ್ಟು 20 ಮಂದಿ ಕಲಾವಿದರು ಭಾಗವಹಿಸಿದ್ದರು.

ಬಳಿಕ ಅಂತಾರಾಷ್ಟ್ರೀಯ ಕಲಾವಿದ ಎಲ್.ಎನ್.ತಲ್ಲೂರು ಅಧ್ಯಕ್ಷತೆಯಲ್ಲಿ ನಡೆದ ಕಾವಿಕಲೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಜಾನಪದ ತಜ್ಞ ಪ್ರೊ.ಎಸ್. ಎ.ಕೃಷ್ಣಯ್ಯ ಕಾವಿ ಕಲೆಯ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News