ಝಿಂಬಾಬ್ವೆ ಉಪಾಧ್ಯಕ್ಷರಿಗೆ ಭಾರತದಲ್ಲಿ ಚಿಕಿತ್ಸೆ

Update: 2019-02-11 17:03 GMT

ಹರಾರೆ (ಝಿಂಬಾಬ್ವೆ), ಫೆ. 11: ಝಿಂಬಾಬ್ವೆಯ ಉಪಾಧ್ಯಕ್ಷ ಕಾನ್‌ ಸ್ಟಾಂಟಿನೊ ಚಿವೆಂಗ ಸಣ್ಣ ಆರೋಗ್ಯ ಸಮಸ್ಯೆಗಾಗಿ ಭಾರತದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಾರ್ತಾ ಖಾತೆಯ ಸಹಾಯಕ ಸಚಿವ ಎನರ್ಜಿ ಮುಟೋಡಿ ಹೇಳಿದ್ದಾರೆ.

ಹದಗೆಡುತ್ತಿರುವ ಆರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಿವೃತ್ತ ಜನರಲ್ ಚಿವೆಂಗ ಭಾರತಕ್ಕೆ ಹೋಗಿದ್ದಾರೆ ಎಂಬುದಾಗಿ ಸ್ಥಳೀಯ ಸುದ್ದಿ ವೆಬ್‌ ಸೈಟೊಂದು ವರದಿ ಮಾಡಿದ ದಿನಗಳ ಬಳಿಕ ಸಚಿವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

62 ವರ್ಷದ ಚಿವೆಂಗ ಅಧ್ಯಕ್ಷ ಎಮರ್‌ ಸನ್ ಮನಂಗಾಗ್ವ ಅವರ ಬೆನ್ನೆಲುಬು ಆಗಿದ್ದಾರೆ ಹಾಗೂ ಅವರ ಉತ್ತರಾಧಿಕಾರಿಯೆಂದು ಭಾವಿಸಲಾಗಿದೆ.

ದಶಕಗಳ ಕಾಲ ದೇಶವನ್ನು ಆಳಿದ ರಾಬರ್ಟ್ ಮುಗಾಬೆ ವಿರುದ್ಧ 2017ರಲ್ಲಿ ನಡೆದ ಬಂಡಾಯದ ನೇತೃತ್ವವನ್ನು ಚಿವೆಂಗ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News