ಜುಗಾರಿ ಅಡ್ಡೆಗೆ ದಾಳಿ: 44 ಮಂದಿ ಬಂಧನ

Update: 2019-02-11 17:15 GMT

ಮಂಗಳೂರು, ಫೆ.11: ಬೈಕಂಪಾಡಿ ಮೀನಕಳಿಯಾ ರಸ್ತೆಯ ಎಡಭಾಗ ಕಾಡುಪೊದರು ಸಾರ್ವಜನಿಕ ಸ್ಥಳದಲ್ಲಿ ಜುಗಾರಿ (ಅಂದರ್-ಬಾಹರ್) ಆಡುತ್ತಿದ್ದ 44 ಆರೋಪಿಗಳನ್ನು ವಶಕ್ಕೆ ಪಡೆದು ಜುಗಾರಿ ಆಟಕ್ಕೆ ಬಳಸಿದ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ರಾಮಪ್ಪ, ಪ್ರಕಾಶ್ ಭಂಡಾರಿ, ದೇವೇಂದ್ರ, ಗಂಗಾಧರ್, ಬರಮಗೌಡ, ಮಂಜಣ್ಣ, ನಾರಾಯಣ, ಪ್ರಶಾಂತ್, ಉಮಾಮಂಜಿ, ರಮೇಶ್, ಐವನ್ ಡಿಸೋಜ, ಹೆಗ್ಗಪ್ಪ, ನಾಗೇಶ್, ಬಾಲಪ್ಪ, ಶಿವಾನಂದ, ರಾಜು, ಪ್ರಶಾಂತ್, ಸಚಿನ್, ಪ್ರವೀಣ್ ನಾಯಕ್, ಪ್ರವೀಣ್ ಚಮ್ಮಲ್, ಶಿವಾನಂದಪ್ಪಬಂಗಾರಿ, ಹರೀಶ್ ಸುವರ್ಣ, ನಾರಾಯಣ ಕಾನ, ಕರೀಂ, ಅಶ್ರಫ್, ಕಳಕಪ್ಪಬೇನಕಟ್ಟಿ, ಮುಹಮ್ಮದ್ ಆರಿಫ್, ಹರಾಧನ್ ಉರಾಂವ್, ಮಂಜುನಾಥ, ವಿಷ್ಣುದಾಸ್, ಮಳೆಯಪ್ಪಸಿದ್ದಪ್ಪಕಂಬಾರ್, ಬಸಪ್ಪಪತ್ರ್ಯಪ್ಪಕೊಟಗಿ, ಮಂಜುನಾಥ, ವಜೀರ್, ಲತೀಶ್, ಪ್ರಭು, ಅಬ್ದುಲ್ ರೆಹಮಾನ್, ರಾಜು, ಮುಹಮ್ಮದ್ ಆರಿಫ್, ಅಬ್ದುಲ್ಲಾ, ಮುಹಮ್ಮದ್ ಹನೀಫ್, ಅಬ್ದುಲ್ ರೆಹಮಾನ್, ಲೋಕನಾಥ, ಯೋಗಿಶ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 75,870 ರೂ. ನಗದು, ಇಸ್ಪೀಟ್ ಎಲೆಗಳು-52 ಮತ್ತು ಕ್ಯಾಂಡಲ್, ದಿನಪತ್ರಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಶ್ರೀನಿವಾಸ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್ ಕುಮಾರ್ ಎಂ.ಎನ್. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News