ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಮಂಗಳೂರಿನ ಯುವಕನಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ

Update: 2019-02-11 17:39 GMT

ಮಂಗಳೂರು, ಫೆ.11: ಮಂಗಳೂರಿನ ಧನರಾಜ್ ಎಂ. ಅವರು ಚಂಢೀಗಡದಲ್ಲಿ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪ್ರಥಮ ದಕ್ಷಿಣ ಭಾರತದ ಯುವಕ ಎನಿಸಿಕೊಂಡಿದ್ದಾರೆ.

ಸರಕಾರ ಅಂಗೀಕೃತ ಫೆಡರೇಷನ್ ಆಫ್ ಬಾಡಿ ಬಿಲ್ಡಿಂಗ್ ಎಸೋಸಿಯೇಷನ್ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಇವರು ರಾಷ್ಟ್ರದ ವಿವಿಧೆಡೆಯಿಂದ ಬಂದ 250 ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಕರ್ನಾಟಕಕ್ಕೆ ಪ್ರಥಮ ಪ್ರಶಸ್ತಿ ಗಳಿಸಿ ಕೊಡುವಲ್ಲಿ ಸಫಲರಾದರು. ಒಟ್ಟು ಹತ್ತು ಸುತ್ತು ಇರುವ ಈ ಸ್ಪರ್ಧೆಯಲ್ಲಿ ದಿಲ್ಲಿಯ ಸ್ಪರ್ಧಾಳುವನ್ನು ಹಿಂದಿಕ್ಕಿ ವಿಜೇತರಾದರು.

‘ದಾನಿಗಳ ಸಹಕಾರದಿಂದ ಪ್ರಶಸ್ತಿ’: ‘ಬಾಡಿ ಬಿಲ್ಡಿಂಗ್‌ಗೆ ಲಕ್ಷಾಂತರ ರೂ. ಖರ್ಚು ಮಾಡುವ ಅಗತ್ಯವಿದ್ದು, ಸರಕಾರದಿಂದ ಯಾವುದೇ ನೆರವಿಲ್ಲದೆ ದಾನಿಗಳ ಸಹಕಾರದಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆದು ಪ್ರಶಸ್ತಿ ಗಳಿಸಿದ್ದೇನೆ. ಬಿರುವೆರ್ ಕುಡ್ಲ, ರಾಜ್ಯ ಫೆಡರೇಷನ್, ಜಿಲ್ಲಾ ಫೆಡರೇಷನ್ ಸಹಿತ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸ ಬಯಸುತ್ತೇನೆ. ರಾಜ್ಯವನ್ನು ಪ್ರತಿನಿಧಿಸಿ ಈ ಪ್ರಶಸ್ತಿ ಪಡೆದಿರುವುದಕ್ಕೆ ಸಂತಸವಾಗಿದೆ ಎಂದು ಮಂಗಳೂರಿನ ಧನರಾಜ್ ಎಂ. ತಿಳಿಸಿದರು.

ಭವ್ಯ ಸ್ವಾಗತ: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ, ಜಿಲ್ಲಾ ಬಾಡಿ ಬಿಲ್ಡಿಂಗ್ ಫೆಡರೇಷನ್ ವತಿಯಿಂದ ಧನರಾಜ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್‌ಬಾಗ್, ಸಂತೋಷ್ ಬಿಜೈ, ಲೋಹಿತ್, ರಿನಿತ್, ರೋಶನ್ ಬಳ್ಳಾಲ್‌ಬಾಗ್ ಕಿರಣ್, ಬಾಡಿ ಬಿಲ್ಡಿಂಗ್ ಎಸೋಸಿಯೇನ್‌ನ ದಿಲೀಪ್‌ಕುಮಾರ್, ಗಂಗಾಧರ್ ಎಂ., ರಾಜೇಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News