3.5 ಕೋ. ರೂ. ಮುಖಬೆಲೆಯ ನಿಷೇಧಿತ ನೋಟು ವಶ, ನಾಲ್ವರ ಬಂಧನ

Update: 2019-02-11 18:14 GMT

ಹೊಸದಿಲ್ಲಿ, ಫೆ. 11: ಗುಜರಾತ್‌ ನ ನವಸರಿ ಜಿಲ್ಲೆಯಲ್ಲಿ ಕಾರೊಂದರಲ್ಲಿ 3.50 ಕೋ. ರೂ. ಮೌಲ್ಯದ ನೋಟುಗಳು ಪತ್ತೆಯಾದ ಬಳಿಕ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಮುಂಬೈಯಿಂದ ಆಗಮಿಸುತ್ತಿತ್ತು. ಇಲ್ಲಿಂದ 280 ಕಿ. ಮೀ. ದೂರದಲ್ಲಿರುವ ಬಿಲಿಮೋರಾದಲ್ಲಿ ಮಧ್ಯರಾತ್ರಿ ಕಾರನ್ನು ತಡೆದೆ ತಪಾಸಣೆ ನಡೆಸಲಾಯಿತು ಎಂದು ಕ್ರೈಮ್ ಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.

 ‘‘ಈ ಕಾರಿನಲ್ಲಿ 500 ರೂಪಾಯಿ ಮುಖಬೆಲೆಯ 2.16 ಕೋಟಿ ರೂಪಾಯಿಯ ಮೌಲ್ಯದ 43,400 ನೋಟುಗಳು ಹಾಗೂ 1000 ಮುಖಬೆಲೆಯ 1.34 ಕೋಟಿ ರೂಪಾಯಿ ಮೌಲ್ಯದ 13,432 ನೋಟುಗಳು ಇದ್ದುವು. ಇದರ ಒಟ್ಟು ಮೌಲ್ಯ 3,50,82,000’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಜಿತೇಂದ್ರ ಪಾಣಿಗ್ರಹಿ, ಮುಹಮ್ಮದ್ ಮೂಮಿನ್ (ಮುಂಬೈ), ಫಕೀರ್ ಮೋಟರ್ವಾಲಾ ಹಾಗೂ ಅಲ್ತಾಫ್ ಶೇಕ್ ಎಂದು ಗುರುತಿಸಲಾಗಿದೆ.

ಕಮಿಷನ್ ಪಡೆಯಲು ನವಸರಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ನಿಷೇಧಿತ ನೋಟುಗಳನ್ನು ಹಸ್ತಾಂತರಿಸುವ ಉದ್ದೇಶದಿಂದ ದುಷ್ಕರ್ಮಿಗಳು ಇಲ್ಲಿಗೆ ನೋಟಿನೊಂದಿಗೆ ಆಗಮಿಸಿರುವ ಸಾಧ್ಯತೆ ಇದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News