×
Ad

ಸಅದಿಯ್ಯ: ಪೆ.13ರಂದು ಯೆನೆಪೋಯ ಅಬ್ದುಲ್ಲ ಕುಂಞಿ ಹಾಜಿಗೆ ಗೌರವಾರ್ಪಣೆ

Update: 2019-02-12 19:22 IST

ಮಂಗಳೂರು, ಫೆ. 12: ಶೈಕ್ಷಣಿಕ - ಸಾಮಾಜಿಕ ಕ್ಷೇತ್ರದಲ್ಲಿ ಅಪೂರ್ವವಾದ ಸಾಧನೆ ಮಾಡಿದ, ಸಅದಿಯ್ಯ ಅನಾಥಾಲಯದ 7 ವಿದ್ಯಾರ್ಥಿಗಳ ಸಹಿತ ಹಲವಾರು ಅನಾಥರಿಗೆ ಎಂಬಿಬಿಎಸ್ ಕಲಿಯಲು ಅವಕಾಶ ಮಾಡಿಕೊಟ್ಟ ಯೆನೆಪೋಯ ಗ್ರೂಪ್ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ ಹಾಜಿರಿಗೆ ಸಅದಿಯ್ಯ ಗೌರವಾರ್ಪಣೆ ಸಲ್ಲಿಸುತ್ತಿದೆ.

ಪೆ.13ರಂದು ಬೆಳಗ್ಗೆ 10.30 ಕ್ಕೆ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯುವ "ಗೋಲ್ಡನ್ ಜುಬಿಲಿ ಘೋಷಣಾ ಸಮಾವೇಶ" ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನಡೆಯಲಿದೆ.

ಸಅದಿಯ್ಯದ ಸ್ಥಾಪಕ ಹಾಗೂ ದೀರ್ಘಕಾಲದ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್‌ರೊಂದಿಗೂ ಜನರಲ್ ಮ್ಯಾನೇಜರ್ ನೂರುಲ್ ಉಲಮಾ ಎಂಎ ಉಸ್ತಾದರೊಂದಿಗೂ ಉತ್ತಮ ಭಾಂದವ್ಯ  ಹೊಂದಿದ್ದ ಅಬ್ದುಲ್ಲ ಕುಂಞಿ ಹಾಜಿಯವರು ಸ‌ಅದಿಯ್ಯದ ಏಳಿಗೆಗಾಗಿ ದುಡಿದರಲ್ಲದೆ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗೌರವಾರ್ಪಣೆ ಕಾರ್ಯಕ್ರಮವು ಸ‌ಅದಿಯ್ಯದ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟ್ಟಕೋಯ ತಂಙಳ್‌  ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮೌಲಾನಾ ಶಂಸುಲ್ ಹಖ್ ಖಾದಿರೀ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನಡೆಸುವರು.

ತಾಜುಶ್ಶರೀಅ ಅಲಿಕುಂಞಿ ಉಸ್ತಾದ್ ಹಾಗೂ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮಾತನಾಡುವರು. ಸಯ್ಯಿದ್ ಅತಾವುಲ್ಲ ತಂಙಳ್, ತಾಜುಲ್ ಫುಖ‌ಆ ಬೇಕಲ್ ಉಸ್ತಾದ್, ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಎ.ಪಿ.ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್, ಲತೀಫ್ ಸಅದಿ ಪಯಶ್ಶಿ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News