×
Ad

ಪ್ರಥಮ ಚಿಕಿತ್ಸೆಯು ಜೀವ ಉಳಿಸುವ ಸಂಜೀವಿನಿ: ಡಾ. ಸೋನಿ ಕುಂದಾಪುರ

Update: 2019-02-12 19:45 IST

ಕೋಡಿ, ಫೆ. 12: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಇವರ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ಅದರ ಅಳವಡಿಕೆಯ ವಿಧಾನದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಕುಂದಾಪುರ ತಾಲೂಕಿನ ಹೆಸರಾಂತ ವೈದ್ಯರಾಗಿರುವ ಡಾ. ಸೋನಿ ಆಡಳಿತ ಮಂಡಳಿ ಸದಸ್ಯರು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕಾರ್ಯಕ್ರಮದ ವಿಷಯವಾದ ಹೃದಯಾಘಾತ, ಹಾವು ಕಡಿತ, ಮದುಮೇಹ, ಅಪಘಾತ, ರಕ್ತದೊತ್ತಡ ಹೀಗೆ ಹಲವಾರು ಪ್ರಥಮ ಚಿಕಿತ್ಸೆಯ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹ್ಮಾನ್ ವಹಿಸಿದ್ದು, ರೆಡ್‍ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಎಸ್.ಜಯಕರ ಶೆಟ್ಟಿ, ಕಾಲೇಜಿನ  ಪ್ರಾಂಶುಪಾಲರಾದ ಡಾ. ಶಮೀರ್ ಮತ್ತು ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕದ ಯೋಜನಾಧಿಕಾರಿ ವಿದ್ಯಾಧರ ಪೂಜಾರಿ,  ಉಪಸ್ಥಿತರಿದ್ದರು.

ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕವನ ಸ್ವಾಗತಿಸಿ, ವಂದಿಸಿದರು. ಅಲ್‍ ತಸ್ಮೀಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News