ಬಂಟ್ವಾಳ ಮೂಲದ ಐಎಎಸ್ ಅಧಿಕಾರಿಗೆ ಕುಂಭಮೇಳದ ಉಸ್ತುವಾರಿ

Update: 2019-02-12 15:14 GMT

ಬಂಟ್ವಾಳ, ಫೆ. 11: ಉತ್ತರ ಪ್ರದೇಶದ ಪ್ರಯಾಗದಲ್ಲಿ ಕುಂಭ ಮೇಳ ನಡೆಯುತ್ತಿದ್ದು, ಇದರ ಸಮಗ್ರ ಉಸ್ತುವಾರಿಯನ್ನಾಗಿ ಐಎಎಸ್ ಅಧಿಕಾರಿ ವಿಜಯ ಕಿರಣ್ ಆನಂದ್‌ರನ್ನು ನೇಮಿಸಲಾಗಿದೆ.

ಇವರು ಬಂಟ್ವಾಳ ತಾಲೂಕಿನ ಲೊರೆಟ್ಟೋಪದವಿನವರು. ಬಂಟ್ವಾಳ ಎಸ್‌ವಿಎಸ್‌ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಬಳಿಕ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸಿ, ಸಿಎ ಪದವಿ ಪಡೆದು, ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಇವರು, ಉತ್ತರ ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ನಾನಾ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

2009ರಲ್ಲಿ ಐಎಎಸ್ ಸೇವೆಗೆ ಸೇರ್ಪಡೆಯಾದ ಅವರು, ಮೈಂಪುರಿ, ಉನ್ನಾವೋ, ಫಿರೋಝಾಬಾದ್, ಬಿಜ್ನೋರ್, ಶಜಹಾನ್ ಪುರ್, ವಾರಾಣಾಸಿಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2016ರಲ್ಲಿ ಉತ್ತರ ಪ್ರದೇಶ ಸರಕಾರದ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಕ್ಲೀನ್ ಇಂಡಿಯಾ ಮಿಷನ್‌ಗೆ ವಿಶೇಷ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು.

ಬಳಿಕ ಪಂಚಾಯತ್ ರಾಜ್ ಇಲಾಖೆಯ ಕ್ಲೀನ್ ಇಂಡಿಯಾ ಮಿಷನ್‌ನ ನಿರ್ದೇಶಕರಾಗಿ ಸರಕಾರದಿಂದ ನೇಮಕಗೊಂಡರು. ಇಡೀ ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅವರ ಪಾತ್ರ ಗಮನಾರ್ಹ. ಇದೀಗ ಪ್ರಯಾಗದ ಕುಂಭ ಮೇಳದ ಸಮಗ್ರ ಉಸ್ತುವಾರಿಯನ್ನು ಅವರು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News