×
Ad

ನಿವೇಶನ, ವಸತಿ ರಹಿತರ ಸಮೀಕ್ಷೆ: ಆನ್‌ಲೈನ್ ನೋಂದಣಿ ಅವಧಿ ವಿಸ್ತರಣೆ

Update: 2019-02-12 21:08 IST

ಉಡುಪಿ, ಫೆ.12: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಸಾಮಾಜಿಕ, ಆರ್ಥಿಕ, ಜಾತಿ ಗಣತಿ-2011ರ ಶಾಶ್ವತ ಪಟ್ಟಿಗೆ ಸೇರಿಸಲು ಉಡುಪಿ ತಾಪಂ ವ್ಯಾಪ್ತಿಯ ಗ್ರಾಪಂಗಳಲ್ಲಿ ಬಾಕಿ ಉಳಿದಿರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಅರ್ಹತೆ ಹೊಂದಿದ್ದು ಸಮೀಕ್ಷೆ ವೇಳೆ ಹೆಸರು ಬಿಟ್ಟು ಹೋಗಿರುವ ಅರ್ಜಿದಾರರ ಆನ್‌ಲೈನ್ ನೋಂದಾವಣೆ ಅವಧಿಯನ್ನು ವಿಸ್ತರಿಸಲಾಗಿದೆ.

ಅರ್ಹ ನಿವೇಶನ ಮತ್ತು ವಸತಿ ರಹಿತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಪಂಗೆ ಭೇಟಿ ನೀಡಿ, ಫೆ.22ರೊಳಗೆ ಹೆಸರು ನೋಂದಾಯಿಸಿ ಕೊಳ್ಳುವಂತೆ ಉಡುಪಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News