×
Ad

ಯಶಸ್ವಿ ಮೂರು ದಶಕ ಪೂರೈಸಿದ ಮಣಿಪಾಲದ ಮಾರ್ಕ್ ಕೇಂದ್ರ

Update: 2019-02-12 22:09 IST

ಉಡುಪಿ, ಫೆ.12: ಮಣಿಪಾಲ ಸಹಾಯಿತ ಪ್ರಜನನ ಕೇಂದ್ರ (ಮಾರ್ಕ್) ತನ್ನ 30 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಮಕ್ಕಳಿಲ್ಲದ ದಂಪತಿಗಳ ಚಿಕಿತ್ಸೆಯಲ್ಲಿ ನಿರೀಕ್ಷೆಗೆ ಮೀರಿ ಯಶಸ್ಸನ್ನು ಸಾಧಿಸಿದ ತೃಪ್ತಿ ಇದೆ ಎಂದು ಮಣಿಪಾಲ ಮಾರ್ಕ್ ಕೇಂದ್ರದ ಮುಖ್ಯಸ್ಥ ಡಾ.ಪ್ರತಾಪ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಕ್ 1990ರಲ್ಲಿ ಆರಂಭಗೊಂಡು ಸಂತಾನಹೀನತೆ ಚಿಕಿತ್ಸೆಯಲ್ಲಿ ವಿಶ್ವದ ಯಾವುದೇ ಕೇಂದ್ರಕ್ಕೂ ಕಡಿಮೆ ಇಲ್ಲದಂತೆ ಅದ್ವಿತೀಯ ಸಾಧನೆ ಮಾಡಿದೆ ಎಂದರು. ಸರಳ ಚಿಕಿತ್ಸೆಗಳೊಂದಿಗೆ ಆರಂಭಗೊಂಡ ಮಾರ್ಕ್ 1998ರಲ್ಲಿ ಪ್ರನಾಳಶಿಶು ಚಿಕಿತ್ಸಾ ಪ್ರಕ್ರಿಯೆಯನ್ನು ಆರಂಭಿಸಿತು. ಐವಿಎಫ್ ಚಿಕಿತ್ಸೆಯಲ್ಲಿ ಪತ್ನಿಯ ಅಂಡಾಣುವಿಗೆ ಪತಿಯ ವೀರ್ಯಾಣುವನ್ನು ದೇಹದಿಂದ ಹೊರಗೆ ಕೃತಕವಾಗಿ ಮಿಲನಗೊಳಿಸಿ, ಬಳಿಕ ಆ ಭ್ರೂಣವನ್ನು ಪತ್ನಿಯ ಗರ್ಭಕೋಶದಲ್ಲಿ ಬೆಳೆಯಲು ಅವಕಾಶ ಮಾಡಿಕೊಡುವುದು ಒಳಗೊಂಡಿದೆ ಎಂದವರು ವಿವರಿಸಿದರು.

ಮಣಿಪಾಲದಲ್ಲಿ ಈ ತನಕ ಐವಿಎಫ್ ಚಿಕಿತ್ಸೆಯಿಂದ 5000ಕ್ಕೂ ಅಧಿಕ ಶಿಶುಗಳ ಜನನವನ್ನು ಸಾಧಿಸಲಾಗಿದೆ. ಮಾರ್ಕ್‌ನಲ್ಲಿ ಸಂತಾನಹೀನತೆ ಇರುವ ದಂಪತಿಗೆ ಹಲವು ವಿಧದ ಸಹಾಯಿತ ಪ್ರಜನನ ಚಿಕಿತ್ಸೆಗಳು ಲಭ್ಯವಿವೆ. ದೇಶ- ವಿದೇಶದಲ್ಲಿ ಚಿಕಿತ್ಸೆ ಕುರಿತಂತೆ ತಾಂತ್ರಿಕ ಪರಿಣತಿ ಪಡೆದು ಬಂದಿರುವ ನುರಿತ ವೈದ್ಯರು ಹಾಗೂ ವಿಜ್ಞಾನಿಗಳು ಮಾರ್ಕ್‌ನಲ್ಲಿದ್ದು, ಇಂದು ಇದು ದೇಶದಲ್ಲೇ ಅತ್ಯಾಧುನಿಕ ಸಹಾಯಿತ ಪ್ರಜನನ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ಮಾರ್ಕ್‌ನಲ್ಲಿ ಯಶಸ್ಸಿನ ಪ್ರಮಾಣ ಶೇ.60 ಆಗಿದೆ. ನಿರ್ಧಿಷ್ಟ ವಯೋಮಿತಿ ಮೀರಿದವರಲ್ಲಿ ಇದು ಶೇ.40 ಆಗಿದೆ. ಪುರುಷರಲ್ಲಿ ಸಂತಾನಹೀನತೆಯ ವಿಶ್ಲೇಷಣೆಗಾಗಿ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲಯ, ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ನೆಲೆಯ ದಾಸ್ತಾನು ಸವಲತ್ತುಗಳ ವೀರ್ಯ ಬ್ಯಾಂಕ್ ಸೌಲಭ್ಯ ಗಳನ್ನು ಕೇಂದ್ರ ಹೊಂದಿದೆ. ಸುಸಜ್ಜಿತವಾದ ಎಂಬ್ರಿಯಾಲಜಿ ಪ್ರಯೋಗಾಲಯ ದಲ್ಲಿ ಅತಿಸೂಕ್ಷ್ಮ ಹಸ್ತಕ್ಷೇಪ ಮತ್ತು ಲೇಸರ್ ಹ್ಯಾಚಿಂಗ್ ಸೌಲಭ್ಯಗಳನ್ನು ಈ ಕೇಂದ್ರ ಹೊಂದಿದೆ ಎಂದರು.

ಮಾರ್ಕ್‌ನಲ್ಲಿ ಯಶಸ್ಸಿನ ಪ್ರಮಾಣ ಶೇ.60 ಆಗಿದೆ. ನಿರ್ಧಿಷ್ಟ ವಯೋಮಿತಿ ಮೀರಿದವರಲ್ಲಿ ಇದು ಶೇ.40 ಆಗಿದೆ. ಪುರುಷರಲ್ಲಿ ಸಂತಾನಹೀನತೆಯ ವಿಶ್ಲೇಷಣೆಗಾಗಿ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲಯ, ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ನೆಲೆಯ ದಾಸ್ತಾನು ಸವಲತ್ತುಗಳ ವೀರ್ಯ ಬ್ಯಾಂಕ್ ಸೌಲ್ಯಗಳನ್ನುಕೇಂದ್ರಹೊಂದಿದೆ. ಸುಸಜ್ಜಿತವಾದಎಂಬ್ರಿಯಾಲಜಿಪ್ರಯೋಗಾಲಯದಲ್ಲಿಅತಿಸೂಕ್ಷ್ಮಹಸ್ತಕ್ಷೇಪಮತ್ತುಲೇಸರ್‌ಹ್ಯಾಚಿಂಗ್‌ಸೌಲ್ಯಗಳನ್ನು ಈ ಕೇಂದ್ರ ಹೊಂದಿದೆ ಎಂದರು.

ಇಲ್ಲಿ ದಾನಿಗಳ ವೀರ್ಯ, ಅಂಡಾಣು ಪಡೆಯುವ ಸೌಲಭ್ಯವಲ್ಲದೇ ಸರೋಗೆಸಿ (ಬಾಡಿಗೆ ತಾಯ್ತನ ಸೌಲಭ್ಯ) ಸೌಲಭ್ಯದ ಮೂಲಕ ಮಕ್ಕಳನ್ನು ಪಡೆಯುವ ಅವಕಾಶ ಕೂಡ ಲಭ್ಯವಿದೆ. ಸಂತಾನಹೀನತೆ ಚಿಕಿತ್ಸೆಗೆ ಸಂಬಂಧಿ ಸಿದಂತೆ ಮಾರ್ಕ್ ನಿರಂತರ ಸಂಶೋಧನೆಗಳಲ್ಲಿ ನಿರತವಾಗಿದ್ದು, ಸಂತಾನಹೀನ ರಿಗೆ ಚಿಕಿತ್ಸಾ ಸವಲತ್ತುಗಳನ್ನು ನಿರಂತರವಾಗಿ ಅಭಿವೃದ್ಧಿ ಪಡಿಸುತ್ತಾ ಬರಲಾಗಿದೆ.

ಕಳೆದ ಮೂರು ವರ್ಷಗಳಿಂದ ವಯಸ್ಸು ಅಥವ ಬೇರೆ ರೋಗಗಳ ಕಾರಣದಿಂದಾಗಿ ಅಂಡಾಣು ಉತ್ಪಾದನೆಯಲ್ಲಿ ಸಮಸ್ಯೆಗಳಿರುವವರಿಗೆ ಅಂಡಾಣು ದಾನ ಸೌಲಭ್ಯ ಮಾರ್ಕ್‌ನಲ್ಲಿ ಲಭ್ಯವಿದೆ. ಗರ್ಭಕೋಶದ ತೊಂದರೆ ಇರುವವರಿಗೆ ಸರೊಗೆಸಿ (ಬಾಡಿಗೆ ತಾಯ್ತನ) ಸೌಲಭ್ಯ ಕೂಡ ಒದಗಿಸಲಾ ಗುತ್ತಿದೆ. ವೀರ್ಯ ಇಲ್ಲದ ವ್ಯಕ್ತಿಗಳು ದಾನಿಗಳ ವೀರ್ಯಾಣು ಪಡೆಯುವ ಸವಲತ್ತು ಸಹ ಇಲ್ಲಿದೆ ಎಂದರು.

ಮಣಿಪಾಲ ಸಹಾಯಿತ ಪ್ರಜನನ ಕೇಂದ್ರಕ್ಕೆ 30 ವರ್ಷ ಪೂರ್ಣಗೊಳ್ಳುವ ಪ್ರಯುಕ್ತ ಫೆ.17ರಂದು ಅಪರಾಹ್ನ 3:00ಗಂಟೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಡಾ.ಟಿಎಂಎಪೈ ಆಡಿಟೋರಿಯಂನಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿಯ ಮಾರುಕಟ್ಟೆ ಮ್ಯಾನೇಜ್ ಸಚಿನ್ ಕಾರಂತ ಉಪಸ್ಥಿತರಿದ್ದರು.

ಮೊದಲ ಪ್ರಣಾಳಶಿಶು ಇಂದು ವೈದ್ಯಕೀಯ ವಿದ್ಯಾರ್ಥಿ

1998ರಲ್ಲಿ ಐವಿಎಫ್ ತಂತ್ರಜ್ಞಾನ ಮಣಿಪಾಲದ ಮಾರ್ಕ್‌ನಲ್ಲಿ ಆರಂಭ ಗೊಂಡಿದ್ದು, 1999 ಫೆ.18 ಮಾರ್ಕ್‌ನಲ್ಲಿ ಮಣಿಪಾಲದ ಮೊದಲ ಪ್ರಣಾಳ ಶಿಶು ಜನನ ಆಯಿತು. ಈ ಶಿಶುವಿಗೆ ಈಗ 20 ವರ್ಷವಾಗಿದೆ. ಈತ ಈಗ ಮಣಿಪಾಲ ಕೆಎಂಸಿಯಲ್ಲಿ ವೈದ್ಯಕೀಯ ಕಲಿಯುತಿದ್ದಾನೆ ಎಂದು ಡಾ.ಪ್ರತಾಪ್ ಕುಮಾರ್ ಹೆಮ್ಮೆಯಿಂದ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News