ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು: 9ನೇ ವಾರ್ಷಿಕೋತ್ಸವಕ್ಕೆ ಸಂಭ್ರಮದ ತೆರೆ
ಮೂಡುಬಿದಿರೆ, ಫೆ. 12: ಜ್ಞಾನವು ಮಾನವ ಸಮೂಹದ ವಿಕಾಸವನ್ನು ಪ್ರಭಾವಿಸಿದ ಪ್ರಮುಖ ಅಂಶವಾಗಿದೆ. ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯಾದ ಸಹ ಸಂಸ್ಥೆಯಾದ ಶಂಸುಲ್ ಉಲಮಾ ಅರಬಿಕ್ ಕಾಲೇಜು ಈ ನಿಟ್ಟಿನಲ್ಲಿ ಈ ರಾಜ್ಯದ ಮುಸ್ಲಿಂ ಸಮುದಾಯದ ಯುವ ತಲೆಮಾರಿಗೆ ನೀಡಿದ ಶೈಕ್ಷಣಿಕ ಸೇವೆ ಅಪಾರವಾದುದು. ಇದೀಗ ಈ ಸಂಸ್ಥೆಯ ಹಲವು ಯುವ ಪಂಡಿತರು ಈ ಸಮುದಾಯದ ಕರ್ಮ ರಂಗಕ್ಕೆ ಅರ್ಪಣೆಯಾಗುತ್ತಿದ್ದು ಹೆಮ್ಮೆಯ ವಿಚಾರವಾಗಿದೆ ಎಂದು ಪಾಣಕ್ಕಾಡ್ ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ತಿಳಿಸಿದರು.
ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ 9 ನೇ ವಾರ್ಷಿಕ ಸಮಾರೋಪ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಾಮಿಯಾ ನೂರಿಯಾದ ಪ್ರೊ. ಖ್ಯಾತ ವಿದ್ವಾಂಸ ಶೈಖುನಾ ಲಿಯಾವುದ್ದೀನ್ ಫೈಝಿ ಅಧ್ಯಕ್ಷತೆ ವಹಿಸಿದರು. ಅಂತರ್ ರಾಷ್ಟ್ರೀಯ ಖ್ಯಾತಿಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ನಡೆಸಿ ಮಾತನಾಡಿ, ವಿದ್ವಾಂಸರನ್ನು ತಯಾರು ಮಾಡುವುದು ಮುಸ್ಲಿಂ ಸಮುದಾಯದ ಪಾಲಿಗೆ ಅತೀ ಪುಣ್ಯದಾಯಕ ಕಾರ್ಯವಾಗಿದೆ. ಆದ್ದರಿಂದ ತೋಡಾರಿನಲ್ಲಿ ತಲೆಯೆತ್ತಿ ನಿಂತಿರುವ ಈ ಜ್ಞಾನದ ಕೇಂದ್ರವನ್ನು ಪ್ರೋತ್ಸಾಹಿಸಿ ನೆಲೆ ನಿಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಉಸ್ಮಾನುಲ್ ಫೈಝಿ ತೋಡಾರು ಪ್ರಾರ್ಥನೆಗೆ ನೇತೃತ್ವ ನೀಡಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ , ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ದ.ಕ ಮುಶಾವರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಅಲ್ ಖಾಸಿಮಿ , ತೋಡಾರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಸಲೀಂ ಫೈಝಿ , ಅಧ್ಯಕ್ಷರಾದ ಸಲೀಂ ಬೂಟ್ ಬಝಾರ್, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ , ಉಸ್ಮಾನ್ ಹಾಜಿ ಏರ್ ಇಂಡಿಯಾ ಮುಂತಾದ ಗಣ್ಯರು ಶುಭ ಹಾರೈಸಿದರು.
ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ದ.ಕ ಫೈಝೀಸ್ ಕೋಶಾಧಿಕಾರಿ ಶರೀಫ್ ಫೈಝಿ ಕಡಬ, ಫೈಝೀಸ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ , ಎಸ್ಕೆ ಎಸ್ಸೆಸ್ಸೆಫ್ ದ.ಕ. ಅಧ್ಯಕ್ಷರಾದ ಖಾಸಿಂ ದಾರಿಮಿ ಕಿನ್ಯ , ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಕೋಶಾಧಿಕಾರಿ ಅಮೀರ್ ತಂಙಳ್ ಕಿನ್ಯ , ಸಂಸ್ಥೆಯ ಉಪ ಪ್ರಾಂಶುಪಾಲರಾದ ರಫೀಕ್ ಅಹ್ಮದ್ ಹುದವಿ ಕೋಲಾರ , ಇರ್ಷಾದ್ ದಾರಿಮಿ ಮಿತ್ತಬೈಲ್, ಶಂಸುಲ್ ಉಲಮಾ ಅರೆಬಿಕ್ ಕಾಲೇಜು ಯು.ಎ.ಇ ಸಮಿತಿ ವರ್ಕಿಂಗ್ ಸೆಕ್ರೆಟರಿ ಅಶ್ರಫ್ ಪರ್ಲಡ್ಕ , ಅಬ್ದುಸ್ಸಲಾಂ ಬಪ್ಪಳಿಗೆ , ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ , ತೋಡಾರು ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕೆ ಮುಹಿಯುದ್ದೀನ್ ಹಾಜಿ , ಎಸ್ಕೆ ಎಸ್ಸೆಸ್ಸೆಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಸದಖತುಲ್ಲಾ ಫೈಝಿ , ಇಸ್ಮಾಯಿಲ್ ಫೈಝಿ ಕಲ್ಲಡ್ಕ, ಅಬ್ದುಲ್ ಮಜೀದ್ ದಾರಿಮಿ ತೋಡಾರು , ನಝೀರ್ ಫೈಝಿ ತೋಡಾರು, ಮೂಸಾ ಶರೀಫ್ ಕುದ್ದುಪದವು , ಹಕೀಂ ಪರ್ತಿಪ್ಪಾಡಿ , ಅಬ್ದುಲ್ ಅಝೀಝ್ ಮಾಲಿಕ್ ಮೂಡುಬಿದಿರೆ, ಎಂ ಜಿ ಹಾಜಿ ತೋಡಾರು, ಎಚ್ ಎಂ ಹಾಜಿ ಹಂಡೇಲ್ ಉಪಸ್ಥಿತರಿದ್ದರು.
ಶನಿವಾರ ನಡೆದ ದಿಕ್ರ್ ಮಜ್ಲಿಸ್ ಮತ್ತು ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಚೇರ್ಮನ್ ಶಾಬಾನ್ ಹಾಜಿ ಸಚ್ಚೇರಿಪೇಟೆ ಸ್ವಾಗತ ಭಾಷಣ ನಡೆಸಿದರು. ಸಂಸ್ಥೆಯ ಗೌರವಾಧ್ಯಕ್ಷರಾದ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಪ್ರಾಸ್ತಾವಿಕ ಭಾಷಣ ನಡೆಸಿದರು. ಸಯ್ಯಿದ್ ಎನ್ ಪಿ ಎಂ ಫಝಲ್ ತಂಙಳ್ ಕುನ್ನುಂಗೈ ಆಧ್ಯಾತ್ಮಿಕ ಸಂಗಮಕ್ಕೆ ನೇತೃತ್ವ ನೀಡಿದರು.
ಸಮ್ಮೇಳನದ ಭಾಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮದ್ರಸಾ ವಿದ್ಯಾರ್ಥಿಗಳ ಬುರ್ದಾ ಸ್ಪರ್ಧೆಯಲ್ಲಿ ದೇರಳಕಟ್ಟೆ ಮದ್ರಸಾ ಪ್ರಥಮ ಸ್ಥಾನ ಹಾಗೂ ಬೆಂಗ್ರೆ ಕಸಬ ಮದ್ರಸಾ ದ್ವಿತೀಯ ಸ್ಥಾನ ಪಡೆಯಿತು. ಅದೇ ರೀತಿ ರಾಜ್ಯ ಮಟ್ಟದ ಬುರ್ದಾ ಖವ್ವಾಲಿ ಸ್ಪರ್ಧೆಯಲ್ಲಿ ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜು ಪ್ರಥಮ ಸ್ಥಾನ ಹಾಗೂ ಕೆ.ಐ.ಸಿ. ಕುಂಬ್ರ ದ್ವಿತೀಯ ಸ್ಥಾನ ಪಡೆಯಿತು.
ಕಾರ್ಯಕ್ರಮದಲ್ಲಿ ಸ್ಮಾಷ್ ಐ.ಎ.ಎಸ್ ಕೋಚಿಂಗ್ ಸೆಂಟರ್ ವಿದ್ಯಾರ್ಥಿ ಸಂಘಟನೆ "ಸುಬಹ್" ಅನ್ನು ಪಾಣಕ್ಕಾಡ್ ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು . ಅದೇ ರೀತಿ ಜಾಮಿಯಾ ನೂರಿಯಾ ನ್ಯಾಷನಲ್ ಮಿಷನ್ ದಅವಾ ಯೋಜನೆಯ ಮಕ್ತಬಾಗಳ ದತ್ತು ಸ್ವೀಕಾರ ಪ್ರಕ್ರಿಯೆಗೆ ತಂಙಳ್ ಚಾಲನೆ ನೀಡಿದರು .
ಸಂಸ್ಥೆಯ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ಒದಗಿಸಲು ವಿಶೇಷ ಪ್ರಯತ್ನ ನಡೆಸಿದ ಮಾಜಿ ಸಚಿವ ಅಮರನಾಥ ಶೆಟ್ಟಿ , ಸ್ವಾಗತ ಸಮಿತಿ ಚೇಯರ್ಮನ್ ಶಾಬಾನ್ ಹಾಜಿ ಸಚ್ಚೇರಿಪೇಟೆ , ಸಮ್ಮೇಳನದ ಸ್ವಯಂ ಸೇವಕ ತಂಡವನ್ನು ಸಜ್ಜುಗೊಳಿಸಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ಮೂಡುಬಿದಿರೆ ವಲಯ ಹಾಗೂ ಶೈಖುನಾ ಮಿತ್ತಬೈಲ್ ಉಸ್ತಾದ್ ಎಕ್ಸಲೆನ್ಸಿ ಅವಾರ್ಡ್ ಪುರಸ್ಕೃತ ಸಂಸ್ಥೆಯ ವಿದ್ಯಾರ್ಥಿ ತನ್ವೀರ್ ಅಹ್ಮದ್ ಸಜಿಪ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿ ಶಂಸುದ್ದೀನ್ ಕಿರಾಅತ್ ಪಠಿಸಿ, ವರ್ಕಿಂಗ್ ಸೆಕ್ರೆಟರಿ ಇಸ್ಹಾಕ್ ಹಾಜಿ ತೋಡಾರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಯಾಸಿರ್ ಉಮರ್ ಮತ್ತು ಅಬ್ದುಲ್ ಫತ್ತಾಹ್ ನಿರೂಪಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಕನ್ವೀನರ್ ಸಲೀಂ ಹಂಡೇಲ್ ವಂದಿಸಿದರು.