ಲೈಂಗಿಕ ಕ್ರಿಯೆಗೆ ಅವಕಾಶ ನೀಡಿದರೆ ಮಾತ್ರ ಮಹಿಳೆಯರಿಗೆ ಎಬೋಲಾ ಲಸಿಕೆ !

Update: 2019-02-12 17:26 GMT

ಬೇನಿ (ಕಾಂಗೊ), ಫೆ. 12: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಮಾರಕ ಎಬೋಲಾ ರೋಗಕ್ಕಾಗಿ ವಿತರಿಸಲಾಗುತ್ತಿರುವ ಲಸಿಕಾ ಕಾರ್ಯಕ್ರಮದಲ್ಲಿ ತೀವ್ರ ರೀತಿಯ ಅವ್ಯವಹಾರಗಳು ನಡೆಯುತ್ತಿವೆ ಎನ್ನುವ ಆರೋಪಗಳು ಹೊರಬಿದ್ದಿವೆ. ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಆಗಸ್ಟ್‌ ನಲ್ಲಿ ಎಬೋಲಾ ಕಾಯಿಲೆ ಹರಡಿದಂದಿನಿಂದ ಕಾಂಗೊದಲ್ಲಿ ಆರೋಗ್ಯ ಕಾರ್ಯಕರ್ತರ ಬಗ್ಗೆ ತೀವ್ರ ಅಪನಂಬಿಕೆ ಉಂಟಾಗಿದೆ ಹಾಗೂ ಲಿಂಗಾಧಾರಿತ ಹಿಂಸೆಯಲ್ಲಿ ಹೆಚ್ಚಳವಾಗಿದೆ ಎನ್ನುವುದು ಹಲವು ಸರಕಾರೇತರ ಸಂಘಟನೆ (ಎನ್‌ಜಿಒ)ಗಳು ನಡೆಸಿರುವ ಸಂಶೋಧನೆಯಲ್ಲಿ ವ್ಯಕ್ತವಾಗಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ನಗರ ಬೇನಿಯಲ್ಲಿ ನಡೆದ ಎನ್‌ಜಿಒಗಳ ಸಮಾವೇಶದಲ್ಲಿ ಈ ಕುರಿತ ಸಂಶೋಧನಾ ವರದಿಗಳನ್ನು ಮಂಡಿಸಲಾಗಿದೆ.

ಕೆಲವು ವ್ಯಕ್ತಿಗಳು ಲೈಂಗಿಕ ಕ್ರಿಯೆಗೆ ಬದಲಿಯಾಗಿ ಲಸಿಕೆ ಮುಂತಾದ ಎಬೋಲಾ ಸಂಬಂಧಿ ಸೇವೆಗಳನ್ನು ನೀಡುತ್ತಿದ್ದಾರೆ ಎಂಬುದಾಗಿ ಹಲವರು ಆರೋಪಿಸಿದ್ದಾರೆ ಎಂದು ಒಂದು ಅಧ್ಯಯನ ಹೇಳಿದೆ.

ಪ್ರಧಾನ ವಾಹಿನಿಯ ಎಬೋಲಾ ಕಾರ್ಯಕರ್ತರು ಕೂಡ ಈ ರೀತಿಯ ಶೋಷಣೆಗೆ ಮುಂದಾಗಿರುವ ಅಪಾಯವಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News