ಉಪವಾಸಿಗರಿಗೆ ಬಲವಂತವಾಗಿ ಆಹಾರ ತಿನ್ನಿಸುವುದು ಅಮಾನವೀಯ: ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆ

Update: 2019-02-12 17:20 GMT

ವಿಶ್ವಸಂಸ್ಥೆ, ಫೆ. 12: ಉಪವಾಸ ಮುಷ್ಕರದಲ್ಲಿರುವವರಿಗೆ ಬಲವಂತವಾಗಿ ಆಹಾರ ತಿನ್ನಿಸುವುದು ‘ಅಮಾನವೀಯ’ ಹಾಗೂ ‘ಅಸ್ವೀಕಾರಾರ್ಹ’ವಾಗಿದೆ ಹಾಗೂ ಅದನ್ನು ವಿಶ್ವಸಂಸ್ಥೆಯ ಸನ್ನದಿನ ಪ್ರಕಾರ ಹಿಂಸೆ ಎಂಬುದಾಗಿ ಪರಿಗಣಿಸಬಹುದಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಹೇಳಿದೆ.

ಭಾರತೀಯರು ಸೇರಿದಂತೆ ಅಮೆರಿಕದ ವಿವಿಧ ಜೈಲುಗಳಲ್ಲಿರುವ ವಲಸಿಗರಿಗೆ ಬಲವಂತವಾಗಿ ಆಹಾರವನ್ನು ತಿನ್ನಿಸಲಾಗುತ್ತಿದೆ ಎಂಬ ಕಳವಳಗಳ ಹಿನ್ನೆಲೆಯಲ್ಲಿ ಅದು ಈ ಹೇಳಿಕೆ ನೀಡಿದೆ.

ಟೆಕ್ಸಾಸ್ ‌ನಲ್ಲಿರುವ ಬಂಧನ ಕೇಂದ್ರವೊಂದರ ಪರಿಸ್ಥಿತಿಯನ್ನು ಪ್ರತಿಭಟಿಸಿ ಉಪವಾಸ ಮುಷ್ಕರ ನಡೆಸುತ್ತಿದ್ದ ಭಾರತೀಯರು ಸೇರಿದಂತೆ ಕನಿಷ್ಠ ಆರು ವಲಸಿಗರಿಗೆ ವಲಸೆ ಅಧಿಕಾರಿಗಳು ಮೂಗಿಗೆ ಕೊಳವೆ ಹಾಕಿ ಬಲವಂತವಾಗಿ ಆಹಾರ ತಿನ್ನಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

ಇದನ್ನು ಭಾರತೀಯ-ಅಮೆರಿಕನ್ ಗುಂಪುಗಳು ತೀವ್ರವಾಗಿ ಖಂಡಿಸಿವೆ ಹಾಗೂ ಇದು ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದಾಗಿ ಬಣ್ಣಿಸಿವೆ.

ಬಲವಂತವಾಗಿ ತಿನ್ನಿಸುವುದು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂಬುದಾಗಿ ವಿಶ್ವ ವೈದ್ಯಕೀಯ ಅಸೋಸಿಯೇಶನ್ ಹೇಳಿದೆ ಎಂದು ಜಿನೇವಾದಲ್ಲಿರುವ ಮಾನವಹಕ್ಕುಗಳ ಹೈಕಮಿಶನರ್ ಕಚೇರಿಯ ವಕ್ತಾರೆ ರವೀನಾ ಶಂದಾಸನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News